ಕ್ರೀಡೆ

ಜಿಪಿಬಿಎಲ್ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಟೈಗರ್ಸ್‌ - ಮುಂಬೈ ವೋಲ್ಸ್ ಸೆಣಸಾಟ

ಬೆಂಗಳೂರು: ಆಗಸ್ಟ್ 27 ರಂದು ಆರಂಭವಾಗಲಿರುವ ಎರಡನೇ ಆವೃತ್ತಿಯ ಗ್ರಾಂಡ್ ಪ್ರಿಕ್ಸೃ್ ಬ್ಯಾಡ್ಮಿಂಟನ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಟೈಗರ್ಸ್‌ ಹಾಗೂ ಮುಂಬೈ ವೋಲ್ಸ್ ತಂಡಗಳು ಸೆಣಸಲಿವೆ. ದಿನದ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಸ್ಟಾರ್ಸ್‌ ತಂಡ ನಾರ್ಥ್ ಈಸ್ಟ್ ರೈನೋಸ್ ತಂಡದ ಸವಾಲು ಎದುರಿಸಲಿದೆ.

ಒಟ್ಟು 13 ದಿನ ನಡೆಯಲಿರುವ ಟೂರ್ನಿಯಲ್ಲಿ ಹೈದರಾಬಾದ್ ಹೌಂಡ್ಸ್, ಪುಣೆ ಪ್ಯಾಂಥರ್ಸ್‌, ಗುಜರಾತ್ ಲಯನ್ಸ್ ಹಾಗೂ ಕೇರಳ ಟಸ್ಕರ್ಸ್‌ ಸೇರಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಆಟಗಾರರು ಟೂರ್ನಿಯಲ್ಲಿ ಆಡಲಿದ್ದಾರೆ. ಪ್ರತಿ ತಂಡಗಳು ತಲಾ ಐದು ಲೀಗ್ ಪಂದ್ಯಳನ್ನು ಆಡಲಿದ್ದು, ಅಗ್ರ ನಾಲ್ಕು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಅರ್ಹತೆ ಸಂಪಾದಿಸಲಿವೆ. ಸೆಪ್ಟೆಂಬರ್ 8ಕ್ಕೆ ೈನಲ್ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 1 ರಂದು ಹೊರತು ಪಡಿಸಿ ಇತರ ಎಲ್ಲ ದಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಮಧ್ಯಾಹ್ನಾ 3 ಗಂಟೆಗೆ, 2ನೇ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿವೆ.

ಪ್ರತಿ ಪಂದ್ಯದಲ್ಲಿ ಆಟಗಾರರು ಮೂರು ಸೆಟ್‌ಗಳನ್ನು ಆಡುವುದನ್ನು ಕಡ್ಡಾಯವಾಗಿದ್ದು, ತಂಡಗಳು ಗೆದ್ದ ಪ್ರತಿ ಪಂದ್ಯಕ್ಕೆ (11 ಅಂಕಗಳು) ಅಂಕ ನೀಡಲಾಗುತ್ತದೆ. ಟ್ರಂಪ್ ಕಾರ್ಡ್ ಪಂದ್ಯವನ್ನು ಒಳಗೊಂಡಂತೆ ತನ್ನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಒಟ್ಟು 18 ಅಂಕಗಳಿಸುತ್ತದೆ ಮತ್ತು ಎಲ್ಲ ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ - 1 ಅಂಕ ನೀಡಲಾಗುತ್ತದೆ. ಮೊದಲ ಸೆಮಿಫೈನಲ್‌ನಲ್ಲಿ ಅಗ್ರ ಸ್ಥಾನ ಪಡೆದ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ, 2 ಮತ್ತು 3ನೇ ಸ್ಥಾನ ಪಡೆದ ತಂಡಗಳು ಎರಡನೇ ಸೆಮಿೈನಲ್‌ನಲ್ಲಿ ಸೆಣಸಲಿವೆ.