ಸೇಂಟ್ ಪೀಟರ್ಸ್ರ್ಬಗ್: ಯುಎಸ್ ಓಪನ್ ಚಾಂಪಿಯನ್ ಬೆಲಾರಸ್ನ ಅರಿನಾ ಸಬಲೆಂಕಾ ಮಹಿಳಾ ಟೆನಿಸ್ನಲ್ಲಿ ನೂತನ ವಿಶ್ವ ನಂ. 1 ಆಟಗಾರ್ತಿ ಎನಿಸಿದ್ದಾರೆ. ಡಬ್ಲ್ಯುಟಿಎ ರ್ಯಾಂಕಿಂಗ್ನಲ್ಲಿ ಪೋಲೆಂಡ್ನ ಇಗಾ ಸ್ವಿಯಾಟೆಕ್ ಅವರ 11 ತಿಂಗಳ ಪ್ರಾಬಲ್ಯವನ್ನು ಕೊನೆಗೊಳಿಸಿರುವ ಸಬಲೆಂಕಾ ಅಗ್ರಸ್ಥಾನಕ್ಕೇರಿದ್ದಾರೆ.
ಸೋಮವಾರ ಪ್ರಕಟಗೊಂಡ ಪರಿಷತ ರ್ಯಾಂಕಿಂಗ್ನಲ್ಲಿ ಸಬಲೆಂಕಾ, ಸ್ವಿಯಾಟೆಕ್ಗಿಂತ 41 ಅಂಕಗಳ ಮುನ್ನಡೆ ಸಾಧಿಸಿದ್ದಾರೆ. ಇನ್ನು ಮುಂದಿನ ತಿಂಗಳು ನಡೆಯಲಿರುವ ಡಬ್ಲ್ಯುಟಿಎ ಫೈನಲ್ಸ್ನಲ್ಲಿ ಸ್ವಿಯಾಟೆಕ್ ಮರಳಿ ನಂ. 1 ಪಟ್ಟಕ್ಕೇರಲು ಪ್ರಯತ್ನಿಸಬಹುದಾಗಿದೆ.