Rishabh Pant: ನಿನ್ನೆ (ಏ.04) ಏಕಾನ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಎಲ್ಎಸ್ಜಿ 12 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಲಖನೌ ನೀಡಿದ 204 ರನ್ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ಗೆ ಉತ್ತಮ ಸಾಥ್ ಸಿಗಲಿಲ್ಲ. ಈ ಮೂಲಕ ಹೀನಾಯ ಸೋಲು ಅನುಭವಿಸಿತು. ಇನ್ನು ಪಂದ್ಯ ಗೆದ್ದ ಖುಷಿಯಲ್ಲಿದ್ದ ಎಲ್ಎಸ್ಜಿ ನಾಯಕ ರಿಷಭ್ ಪಂತ್ಗೆ ಬಿಸಿಸಿಐ ದಂಡ ವಿಧಿಸಿದೆ.
ಇದನ್ನೂ ಓದಿ: ನನ್ನನ್ನು ರಿಜೆಕ್ಟ್ ಮಾಡಿಬಿಟ್ಟರು! ಆಡಿಷನ್ಗೆ ಹೋಗಲು ನನಗೇನು ನಾಚಿಕೆ ಇಲ್ಲ: ಪೂಜಾ ಹೆಗ್ಡೆ ಓಪನ್ ಟಾಕ್ | Pooja Hegde
12 ರನ್ಗಳ ಜಯ ಕಂಡ ಲಖನೌ ಸೂಪರ್ ಜೈಂಟ್ಸ್, 20 ಓವರ್ಗಳನ್ನು ನಿಗದಿತ ಸಮಯದೊಳಗೆ ಮುಗಿಸುವಲ್ಲಿ ವಿಫಲಗೊಂಡಿತು. ಈ ಆವೃತ್ತಿಯಲ್ಲಿ ಮೊದಲ ಮಂದಗತಿಯ ಓವರ್ ಮಾಡಿದ ಹಿನ್ನೆಲೆ ಬಿಸಿಸಿಐ ರಿಷಭ್ ಪಂತ್ಗೆ 12 ಲಕ್ಷ ರೂ. ದಂಡವನ್ನು ವಿಧಿಸಿದೆ. ಕಳೆದ ಬಾರಿಯ ಆವೃತ್ತಿಯಲ್ಲಿಯೂ ಇದೇ ರೀತಿಯಲ್ಲಿ ಸತತ ಮೂರನೇ ಬಾರಿಗೆ ಮಂದಗತಿಯ ಓವರ್ ರೇಟ್ ನಿಭಾಯಿಸಿದ್ದ ಕಾರಣಕ್ಕೆ ಒಂದು ಪಂದ್ಯದಿಂದ ರಿಷಭ್ ಹೊರಗುಳಿದಿದ್ದರು. ಈಗ 18ನೇ ಆವೃತ್ತಿಯಲ್ಲಿ ಎಲ್ಎಸ್ಜಿ ಪರ ಮೊದಲನೇ ಸ್ಲೋ ಓವರ್ ಮಾಡಿರುವ ಕಾರಣ 12 ಲಕ್ಷ ರೂ. ದಂಡಕ್ಕೆ ತುತ್ತಾಗಿದ್ದಾರೆ.
ಈ ಹಿಂದೆ ಮೂರು ಪಂದ್ಯಗಳಲ್ಲಿ ತಂಡವು ಮಂದಗತಿಯ ಓವರ್ ಮಾಡಿದ್ದಲ್ಲಿ ಆ ತಂಡದ ಕ್ಯಾಪ್ಟನ್ಗೆ ಭಾರೀ ದಂಡದ ಜತೆಗೆ ಮುಂಬರುವ ಒಂದು ಪಂದ್ಯದಿಂದ ನಿಷೇಧಿಸಲಾಗುತ್ತಿತ್ತು. ಆದ್ರೆ, 18ನೇ ಆವೃತ್ತಿಯಿಂದ ಈ ನಿಯಮವನ್ನು ತೆಗೆದುಹಾಕಿರುವ ಬಿಸಿಸಿಐ, ಕ್ಯಾಪ್ಟನ್ರನ್ನು ಒಂದು ಪಂದ್ಯದಿಂದ ನಿಷೇಧಿಸುವ ನೀತಿಯನ್ನು ಬದಲಿಸಿ, ಕೇವಲ ದಂಡವನ್ನು ಮಾತ್ರ ವಿಧಿಸಲು ನಿರ್ಧರಿಸಿದೆ,(ಏಜೆನ್ಸೀಸ್).