ದುಬೈನಲ್ಲಿ ನಡೆಯಲಿರುವ ಐಪಿಎಲ್ ಒಂದು ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಫ್ರಾಂಚೈಸಿಗಳು ಈಗಾಗಲೇ ಯುಎಇ ಸೇರಿಕೊಂಡು, ಸಿದ್ಧತೆಯಲ್ಲಿ ತೊಡಗಿವೆ. ಆಟಗಾರರೂ ಅಭ್ಯಾಸ ಶುರು ಮಾಡಿದ್ದಾರೆ.
ಆದರೆ ಈ ಬಾರಿಯ ಐಪಿಎಲ್ಗೆ ಕರೊನಾ ಭೂತ ಕಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ನ 13 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿತ್ತು ಇದೀಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವೈದ್ಯಕೀಯ ತಂಡದ ಸಿಬ್ಬಂದಿಯೋರ್ವರಲ್ಲಿ ಸೋಂಕು ದೃಢಪಟ್ಟಿದೆ. ಇದನ್ನೂ ಓದಿ: ಇಬ್ಬರು ಭಾರತೀಯರನ್ನು ಉಗ್ರಪಟ್ಟಿಗೆ ಸೇರಿಸುವ ಪಾಕ್ ಪ್ರಯತ್ನಕ್ಕೆ ಪಂಚ ರಾಷ್ಟ್ರಗಳ ಪಂಚ್
ಬಿಸಿಸಿಐನ ಹಿರಿಯ ವೈದ್ಯಾಧಿಕಾರಿಯೋರ್ವರಿಗೆ ಕರೊನಾ ಇರುವುದು ದೃಢಪಟ್ಟಿದೆ. ಸೋಂಕಿನ ಯಾವುದೇ ಲಕ್ಷಣಗಳೂ ಇಲ್ಲ. ಅವರೀಗ ಐಸೋಲೇಟ್ ಆಗಿದ್ದಾರೆ. ಸದ್ಯಕ್ಕಂತೂ ಯಾರದ್ದೂ ಸಂಪರ್ಕದಲ್ಲಿ ಇಲ್ಲ. ಯುಎಇಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ. ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದಿನ ಸುತ್ತಿನ ಟೆಸ್ಟ್ನಲ್ಲಿ ನೆಗೆಟಿವ್ ರಿಪೋರ್ಟ್ ಬರುವ ಭರವಸೆ ಇದೆ. ಹಾಗೇ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಇಬ್ಬರಲ್ಲೂ ಕರೊನಾ ಇರುವುದು ದೃಢಪಟ್ಟಿದ್ದು, ಐಸೋಲೇಟ್ ಆಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. (ಏಜೆನ್ಸೀಸ್)