ಕ್ರೀಡೆ

ಈ ಇಬ್ಬರ ಭವಿಷ್ಯ ನಿರ್ಧಾರ ಮಾಡಲು ಗಂಭೀರ್​-ಅಗರ್ಕರ್​ಗೆ BCCI ಮುಕ್ತ ಅವಕಾಶ; ಚಾಂಪಿಯನ್ಸ್​ ಟ್ರೋಫಿ ಬಳಿಕ ರೋಹಿತ್​, ಕೊಹ್ಲಿ​ ನಿವೃತ್ತಿ?

ಟೀಮ್​ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮ, ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಭವಿಷ್ಯ ನಿರ್ಧಾರ ಮಾಡಲು ಕೋಚ್​​ ಗೌತಮ್​​ ಗಂಭೀರ್​ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ಗೆ ಭಾರತೀಯ ಕ್ರಿಕೆಟ್​ ಮಂಡಳಿ(BCCI) ಮುಕ್ತ ಅವಕಾಶ ನೀಡಿದೆ ಎಂದು ವರದಿಯಾಗಿದೆ.

ಹೌದು, ಇದೇ ಫೆ.19ರಿಂದ ಆರಂಭವಾಗಲಿರುವ ಚಾಪಿಂಯನ್​​ ಟ್ರೋಫಿ ಆಡಲಿರುವ ದಿಗ್ಗಜ ಆಟಗಾರರಾದ ರೋಹಿತ್​, ವಿರಾಟ್​ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಇದೀಗ ಇಬ್ಬರ ಆಟಗಾರರ ಭವಿಷ್ಯ ನಿರ್ಧಾರ ಮಾಡಲು ಅಜಿತ್​- ಗಂಭೀರ್​ಗೆ ಬಿಸಿಸಿಐ ಕೂಡ ಮುಕ್ತ ಅವಕಾಶ ನೀಡಿದೆ.

ವರದಿಗಳ ಪ್ರಕಾರ, ''ಭಾರತ ಕ್ರಿಕೆಟ್​ ತಂಡದ ಸುಧಾರಣೆಗಾಗಿ ಯಾವುದೇ ನಿರ್ಧಾರ ತೆಗದುಕೊಳ್ಳಲು ಈ ಇಬ್ಬರಿಗೆ ಬಿಸಿಸಿಐ ಅವಕಾಶ ನೀಡಿದೆ. ಮುಂದೆ ಸಾಗುವ ಸಮಯ ಬಂದಿದೆ. ಬಾರ್ಡರ್​- ಗವಸ್ಕರ್ ಸರಣಿಯಲ್ಲಿ ಅವರ(ವಿರಾಟ್​-ರೋಹಿತ್​) ಪ್ರದರ್ಶನ ನೋಡಿದ್ದಿರಾ?, ರಣಜಿಯಲ್ಲಿ ಅವರ ಪ್ರದರ್ಶನ? ಮತ್ತು ಮುಂದಿನ ಚಾಪಿಂಯನ್​ ಟ್ರೋಫಿ ಪಂದ್ಯಗಳು ಅವರ ಭವಿಷ್ಯ ನಿರ್ಧಾರ ಮಾಡಲಿವೆ'' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದ ವರದಿ ಉಲ್ಲೇಖಿಸಿವೆ.

ಕೊಹ್ಲಿ ಕೂಡ ಒತ್ತಡದಲ್ಲಿ ಇರುವುದು ಖಚಿತ, ಕಾರಣ ಮುಂದಿನ ಚಾಂಪಿಯನ್​​ ಟ್ರೋಫಿ ಸೇರಿದಂತೆ ಅಸಿಸ್​ ಪಂದ್ಯಗಳನ್ನು ಎದುರಿಸಬೇಕಾಗುತ್ತಿದೆ. ಟೆಸ್ಟ್​ ತಂಡದಲ್ಲಿ ಕೊಹ್ಲಿ ಭವಿಷ್ಯ ಚರ್ಚೆಗೆ ಗ್ರಾಸವಾಗಿದೆ. ರೋಹಿತ್​ನಂತೆಯೇ ವಿರಾಟ್​ ಕೂಡ ಉತ್ತಮ ಪ್ರದರ್ಶನ ನೀಡದಿದ್ದರೆ, ಗಂಭೀರ್ ಮತ್ತು ಅಜಿತ್​ ಮುಂದೆ ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ.(ಏಜೆನ್ಸೀಸ್​)