Asia Cup : ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಒಂಬತ್ತನೇ ಬಾರಿಗೆ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಏಷ್ಯಾಕಪ್ ( Asia Cup ) ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 21 ಕೋಟಿ ರೂ. ಬಹುಮಾನ ನೀಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂದು (ಸೆ.28) ಭಾರತ ಮತ್ತು ಪಾಕಿಸ್ತಾನ ತಂಡಗಳು ಜಿದ್ದಾಜಿದ್ದಿನ ಪೈಪೋಟಿಗೆ ನಡೆಸಿದವು. ಪಾಕಿಸ್ತಾನ ನೀಡಿದ 147 ರನ್ಗಳ ಗುರಿಬೆನ್ನಟ್ಟಿದ ಭಾರತ ಕೊನೆಯ ಓವರ್ನಲ್ಲಿ ತೀವ್ರ ಕುತೂಹಲ ಮೂಡಿಸಿ ಪಾಕ್ ವಿರುದ್ಧ ಗೆಲುವು ಸಾಧಿಸಿತು.
ಇದನ್ನೂ ಓದಿ: ಭಾರತ vs ಪಾಕಿಸ್ತಾನ: ಒಂದು ಪೋಸ್ಟ್ ಮೂಲಕ ಪಾಕ್ ಬಾಯಿ ಮುಚ್ಚಿಸಿದ ಮಿತಾಬ್ ಬಚ್ಚನ್! amitabh bachchan
ಭಾರತ ತಂಡವು 20 ಓವರ್‌ಗಳಲ್ಲಿ 150 ರನ್ ಗಳಿಸುವ ಮೂಲಕ ಬದ್ಧ ವೈರಿ ಪಾಕಿಸ್ತಾನದ ಎದುರು ಅದ್ಭುತ ಜಯ ಸಾಧಿಸಿತು. ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ ಏಷ್ಯಾಕಪ್ ಟ್ರೋಫಿ ಮುಡಿಗೇರಿಸಿಕೊಂಡಂತಾಯಿತು.
ತಂಡದ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ತಂಡದ ಅಧಿಕಾರಿಗಳ ನಡುವೆ ಹಂಚಿಕೊಳ್ಳಲು ಬಿಸಿಸಿಐ 21 ಕೋಟಿ ರೂ.ಗಳ ಬೃಹತ್ ಬಹುಮಾನವನ್ನು ಘೋಷಿಸಿದೆ. ಪಂದ್ಯಾವಳಿಯಲ್ಲಿ ಅವರ ಕಠಿಣ ಪರಿಶ್ರಮ ಮತ್ತು ಅತ್ಯುತ್ತಮ ಕೌಶಲ್ಯವನ್ನು ಗುರುತಿಸಿ ಈ ಬಹುಮಾನ ಹಣವನ್ನು ಘೋಷಿಸಲಾಗಿದೆ.
ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಅನೇಕ ವಿವಾದಗಳು ಮತ್ತು ಮಾಧ್ಯಮಗಳಲ್ಲಿ ತೀವ್ರ ಚರ್ಚೆಯ ಹೊರತಾಗಿಯೂ, ಭಾರತೀಯ ತಂಡವು ಒತ್ತಡವನ್ನು ತಡೆದುಕೊಂಡು ಅಸಾಧಾರಣ ಆಟದ ಶೈಲಿಯನ್ನು ಪ್ರದರ್ಶಿಸಿತು. ಈ ನಗದು ಬಹುಮಾನವು ಭವಿಷ್ಯದಲ್ಲಿ ಆಟಗಾರರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ ಎಂದು ಬಿಸಿಸಿಐ ಹೇಳಿದೆ.
ಏಷ್ಯಾ ಕಪ್ ಗೆಲುವಿನ ನಂತರ ತಂಡವು ಟ್ರೋಫಿಯನ್ನು ಸ್ವೀಕರಿಸಲಿಲ್ಲ. ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಭಾರತವು ಟ್ರೋಫಿಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭವು ಪ್ರಶಸ್ತಿ ಪ್ರದಾನ ಮಾಡದೆಯೇ ಕೊನೆಗೊಂಡಿತು.