ಢಾಕಾ: ಮಹಾಮಾರಿ ಕರೊನಾ ವೈರಸ್‌ಗೆ ಮದ್ದು ಕಂಡುಹಿಡಿಯಲು ವಿಶ್ವದ ವಿವಿಧೆಡೆ ಕಸರತ್ತು ನಡೆಯುತ್ತಲೇ ಇದೆ. ಜಾಗತಿಕ ಕ್ರೀಡಾಲೋಕಕ್ಕೆ ಕಂಕಟವಾಗಿರುವ ಕೋವಿಡ್-19 ಕಂಡುಹಿಡಿಯಲು ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ (ಬಿಸಿಬಿ) ಮಾರ್ಗವೊಂದನ್ನು ಕಂಡು ಕೊಂಡಿದೆ. ಆಟಗಾರರಿಗೆ ಸಹಾಯವಾಗುವ ಸಲುವಾಗಿ ಪ್ರತ್ಯೇಕ ಆ್ಯಪ್ ತಯಾರಿಸಿಕೊಂಡಿದೆ. ಮಾಜಿ ನಾಯಕ ಮಶ್ರೆ ಮೊರ್ಟಜ, ನಜ್ಮುಲ್ ಇಸ್ಲಾಂ ಹಾಗೂ ನಫೀಸ್ ಇಕ್ಬಾಲ್‌ಗೆ ಕರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.
ಕರೊನಾ ವೈರಸ್ ಭೀತಿಯಿಂದಾಗಿ ಸಂಪೂರ್ಣ ಕ್ರೀಡಾ ಚಟುವಟಿಕೆಗಳೇ ಬಂದ್ ಆಗಿವೆ. ಇದೀಗ
ಕ್ರೀಡಾಪಟುಗಳು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಿದೆ. ಇದಕ್ಕಾಗಿ ಬಿಸಿಬಿ ಆಟಗಾರರ ಯೋಗ ಕ್ಷೇಮಕ್ಕೆ ಆ್ಯಪ್ ತಯಾರಿಸಿಕೊಂಡಿದೆ. ಆಟಗಾರರ ಫಿಟ್ನೆಸ್ ಹಾಗೂ ಆರೋಗ್ಯದ ಸ್ಥಿತಿಗತಿ ಬಗ್ಗೆ ನಿಗಾವಹಿಸಲಿದೆ ಎಂದು ಬಿಸಿಬಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ನಿಜಾಮುದ್ದೀನ್ ಚೌಧರಿ ತಿಳಿಸಿದ್ದಾರೆ. 70 ಆಟಗಾರರಿಗೆ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಜತೆಗೆ ಎಲ್ಲ ಆಟಗಾರರನ್ನು ಒಂದೇ ಸೂರಿನಡಿ ತರುವುದೇ ಇದರ ಉದ್ದೇಶ. 19 ವಯೋಮಿತಿ, ಪುರುಷರ ಹಾಗೂ ಮಹಿಳಾ ವಿಭಾಗದ ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರರಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಪಾರ್ಕ್ನಲ್ಲಿ ರೋಹಿತ್ ಶರ್ಮ ವರ್ಕ್ಔಟ್
ಆಟಗಾರರು ಸೂಕ್ತವಾಗಿ ಸಿದ್ಧತೆ ಕೈಗೊಳ್ಳದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ಬುಧವಾರವಷ್ಟೇ ಶ್ರೀಲಂಕಾ ಪ್ರವಾಸವನ್ನು ಮುಂದೂಡಿತ್ತು. ಮುಂದಿನ ತಿಂಗಳು ಲಂಕಾ ಎದುರು 3 ಪಂದ್ಯಗಳ ಟೆಸ್ಟ್ ಸರಣಿ ಆಡಬೇಕಿತ್ತು.