ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಎಡಗೈ ಬ್ಯಾಟ್ಸ್ಮನ್ ಇಶಾನ್ ಕಿಶನ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಉನ್ನತ ಮಟ್ಟದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ಅದಕ್ಕೆ ಮಾನಸಿಕ ಆಯಾಸವೇ ಕಾರಣ ಎಂದು ಹೇಳಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಇಶಾನ್ ಹೊರನಡೆಯಲು 'ಮಾನಸಿಕ ಆಯಾಸ' ಕಾರಣ ಎಂದು ಇತ್ತೀಚಿನ ವರದಿಯೊಂದು ಉಲ್ಲೇಖಿಸಿದೆ. ಮಾಹಿತಿಯ ಪ್ರಕಾರ, ಎಡಗೈ ಬ್ಯಾಟರ್ ಕಳೆದ ವರ್ಷದಿಂದ ತಂಡದೊಂದಿಗೆ ನಿರಂತರವಾಗಿ ಪ್ರಯಾಣ ಮಾಡಿದ್ದೇ ಇದಕ್ಕೆ ಕಾರಣವಾಗಿದ್ದು, ಸದ್ಯ ಕೊಂಚ ವಿರಾಮ ಬೇಕು ಎಂದು ಟೀಮ್ ಮ್ಯಾನೇಜ್ಮೆಂಟ್ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇಶಾನ್ ಹೆಚ್ಚಿನ ಸಮಯ ತಂಡದಲ್ಲಿಯೇ ಕಳೆದಿದ್ದಾರೆ. ಆದರೆ ಪ್ಲೇಯಿಂಗ್ ಇಲೆವನ್ನಲ್ಲಿ ಸ್ಥಿರವಾದ ಭಾಗವಾಗಿರಲಿಲ್ಲ. ಕಿಶನ್ 2023ರ ವಿಶ್ವಕಪ್‌ನಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಉಳಿದ ಆಟವನ್ನು ಶುಬ್‌ಮನ್ ಗಿಲ್ ಭರ್ತಿ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ನಂತರದ ಟಿ-20ಐ ಸರಣಿಯ 5 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಕಿಶನ್ ಅವಕಾಶ ಪಡೆದಿದ್ದರು.
ಇದನ್ನೂ ಓದಿ: ಮೈಚಾಂಗ್ ಚಂಡಮಾರುತ: ವಿಪತ್ತು ಪರಿಹಾರ ವಿಚಾರಕ್ಕೆ ವಿತ್ತ ಸಚಿವೆ ಮತ್ತು ಡಿಎಂಕೆ ಸರ್ಕಾರ ವಿರುದ್ಧ ಮಾತಿನ ಸಮರ!
ಇದೀಗ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ಕಿಶನ್ ಸ್ಥಾನವನ್ನು ಆಂಧ್ರಪ್ರದೇಶದ ವಿಕೆಟ್ ಕೀಪರ್, ಬ್ಯಾಟರ್ ಆದ ಕೆ.ಎಸ್. ಭರತ್ ತುಂಬಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಭರತ್ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ,(ಏಜೆನ್ಸೀಸ್).