England Pacer: ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ತಮ್ಮ ವೃತ್ತಿಜೀವನದಲ್ಲಿ ಭಾರತದ ವಿರುದ್ಧ ಕೆಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದ್ದು, ಭಾರತದ ದಿಗ್ಗಜ ಜೋಡಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಯುವ ಆಟಗಾರ ರಿಷಭ್ ಪಂತ್ ವಿರುದ್ಧ ಬೌಲಿಂಗ್ ಮಾಡುವುದು ಕಷ್ಟಕರ ಎಂದಿದ್ದಾರೆ.
ಓವರ್‌ಲ್ಯಾಪ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ವುಡ್, ಈ ಮೂವರು ಭಾರತೀಯ ಆಟಗಾರರು ಒಡ್ಡಿದ ಸವಾಲುಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:‘ಐರನ್ಮ್ಯಾನ್’ ಪೂರ್ಣಗೊಳಿಸಿದ ‘ಐಜಿಪಿ ಸಂದೀಪ್ ಪಾಟೀಲ್’ಗೆ ಅಭಿನಂದನೆ ಸಲ್ಲಿಸಿದ ಶಾಸಕ ‘ಸುರೇಶ್ ಕುಮಾರ್’| igp
ನನ್ನ ವೃತ್ತಿಜೀವನದ ವಿವಿಧ ಹಂತಗಳಲ್ಲಿ ನಿಮಗೆ ಸವಾಲಾದ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವುಡ್, ನಾನು ರೋಹಿತ್ ಶರ್ಮಾ ಎಂದು ಹೇಳುತ್ತೇನೆ. ಶಾರ್ಟ್ ಬಾಲ್ ವಿರುದ್ಧ ಅವರನ್ನು ಔಟ್ ಮಾಡುವುದು ತುಂಬಾ ಕಷ್ಟ, ಅವರು ಆ ದಿನ ಉತ್ತಮ ಲಯದಲ್ಲಿದ್ದರೆ ಬೌಲರ್‌ಗಳನ್ನು ಧೂಳಿಪಟ ಮಾಡುತ್ತಾರೆ ಎಂದರು.
ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾ ಕೊಹ್ಲಿ, ಖಂಡಿತ ನಂಬಲಾಗದ ಪ್ರತಿಸ್ಪರ್ಧಿ. ಅವರಿಗೆ ನಾಲ್ಕನೇ ಮತ್ತು ಐದನೇ ಸ್ಟಂಪ್‌ಗಳ ದೌರ್ಬಲ್ಯ ಇದ್ದಂತೆ ತೋರುತ್ತಿತ್ತು. ಆದರೆ ನಾನು ಅಲ್ಲಿ ಬೌಲ್ ಮಾಡಿದಾಗ ಅವರು ಎಂದಿಗೂ ತಮ್ಮ ವಿಕೆಟ್ ಕೈ ಚೆಲ್ಲಲಿಲ್ಲ ಎಂದರು.
ರಿಷಭ್ ಪಂತ್ ಬಗ್ಗೆ ಮಾತನಾಡಿದ ವುಡ್, ಅನಿರೀಕ್ಷಿತತೆ ಮತ್ತು ನಿರ್ಭಯತೆ ಪಂತ್ ಅವರ ದೊಡ್ಡ ಅಸ್ತ್ರಗಳು, ತಮ್ಮ ಆಕ್ರಮಣಕಾರಿ ಆಟದ ಮೂಲಕ ಬೌಲರ್‌ಗಳನ್ನು ಗೊಂದಲಕ್ಕೀಡಾಗುವಂತೆ ಮಾಡುವಲ್ಲಿ ಪಂತ್ ನಿಸ್ಸಿಮ ಎಂದರು.
ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಟೆಸ್ಟ್ ಮತ್ತು ಟಿ20ಐಗಳಿಂದ ನಿವೃತ್ತಿ ಹೊಂದಿದ್ದು, ಕೇವಲ ಏಕದಿನ ಪಂದ್ಯಗಳತ್ತ ಗಮನ ಹರಿಸಿದ್ದಾರೆ, ಆದರೆ ಪಂತ್ ಭಾರತದ ಟೆಸ್ಟ್ ತಂಡದ ಮೂಲಾಧಾರವಾಗಿದ್ದಾರೆ.(ಏಜೆನ್ಸೀಸ್)