ಬಂಜಾರ ನೌಕರರ ಪ್ರಥಮ ಕ್ರೀಡಾಕೂಟ ಯಶಸ್ವಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸರ್ಕಾರಿ ಕೆಲಸದಲ್ಲಿ ಒತ್ತಡ ಇರುತ್ತದೆ. ಅದರ ನಡುವೆಯೂ ಸಮಯ ಮಾಡಿಕೊಂಡು ಆರೋಗ್ಯದ ಕಡೆಗೆ ಗಮನ ನೀಡಬೇಕು, ಅದಕ್ಕಾಗಿ ಕ್ರೀಡೆಗಳು ಸಮಯವನ್ನು ಕೊಡಿ ಎಂದು ನಗರ ಪೊಲೀಸ್ ಆಯುಕ್ತ ಚೇತನ ಆರ್. ಅವರು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಬಂಜಾರ ಸÀರ್ಕಾರಿ ಮತ್ತು ಆರೆ ಸರ್ಕಾರಿ ನೌಕರರ ಸಂಘದಿAದ ಭಾನುವಾರ ಹಮ್ಮಿಕೊಂಡಿದ್ದ ಬಂಜಾರ ನೌಕರರ ಪ್ರಥಮ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲವನ್ನು ಹಣದಿಂದ ಕೊಂಡುಕೊಳ್ಳಬಹುದು, ಆದರೆ, ಆರೋಗ್ಯವನ್ನು ಖರೀದಿಸಲು ಆಗಲ್ಲ. ಹೀಗಾಗಿ ಆರೋಗ್ಯದ ಕಡೆಗೆ ಎಲ್ಲರು ಗಮನ ಕೊಡಬೇಕು ಎಂದರು.
ಸದಾ ಕೆಲಸದಲ್ಲಿ ತೊಡಗಿಸಿಕೊಂಡರೆ ಉತ್ಪಾದಕತೆ ಕಡಿಮೆಯಾಗುತ್ತದೆ. ಆಗಾಗ ಮನಸ್ಸು ಪ್ರಫುಲ್ಲಗೊಳಿಸುವ ಆಟೋಗಳಲ್ಲಿ ತೊಡಿಗಿಸಿಕೊಳ್ಳಬೇಕು. ನಿತ್ಯವಾಕಿಂಗ್, ಯೋಗ ಮಾಡುವುದು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು. ಬಂಜಾರರು ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದವರು ಎಂದು ಬಣ್ಣಿಸಿದರು.
ಮಕ್ಕಳನ್ನು ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡುವಂತೆ ಮಾಡಿ. ಇದರಿಂದ ಮಗುವಿನಲ್ಲಿ ಸೋಲು ಗೆಲುವು ಗೊತ್ತಾಗುತ್ತದೆ. ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೆ ಆಟಗಾರರು ಸದಾ ಸಕಾರಾತ್ಮಕವಾಗಿ ಚಿಂತನೆ ಮಾಡುತ್ತಾರೆ ಎಂದು ಪೊಲೀಸ್ ಆಯುಕ್ತ ಚೇತನ ಹೇಳಿದರು.
ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ವಿಶಿಷ್ಠವಾದ ಸಂಸ್ಕೃತಿ, ಜೀವನ ಶೈಲಿಯನ್ನು ರೂಢಿಸಿಕೊಂಡು ಬಂದಿರುವ ಬಂಜಾರರು ಶ್ರೇಷ್ಠರು, ಅವರಲ್ಲಿನ ಮಾನವೀಯತೆ, ಇತರರನ್ನು ಗೌರವಿಸುವ ಪರಿ ಅಪಾರವಾಗಿದೆ. ಶ್ರೇಷ್ಠ ವಾಗಿರುವ ಶ್ರಮ ಸಂಸ್ಕೃತಿಯನ್ನು ಪಾಲಿಸಿಕೊಂಡು ಬಂದವರು. ನಂಬಿಕೆಯ ಸಮದಾಯವಾಗಿದೆ. ಪ್ರಥಮ ಬಂಜಾರ ಕ್ರೀಡಾಕೂಟ ಆಯೋಜಿಸಿದ್ದು ಮಾದರಿಯಾಗಿದೆ. ಹೀಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಗಳನ್ನು ನಡೆಸಲು ಸಲಹೆ ನೀಡಿದರು.
ನೌಕರರ ಸಂಘದ ಅಧ್ಯಕ್ಷ ಸುನೀಲಕುಮಾರ ಚವ್ಹಾಣ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸತೀಶ ಚವ್ಹಾಣ ಸ್ವಾಗತಿಸಿದರು. ಮುಖಂಡರಾದ ರಾಮಚಂದ್ರ ಜಾಧವ್, ವಿಠಲ ಜಾಧವ್, ಸಂಘದ ಮಾಜಿ ಅಧ್ಯಕ್ಷರಾದ ತಾರಾನಾಥ ಚವ್ಹಾಣ, ಬಿ.ಬಿ.ನಾಯಕ್, ಪಿ.ಜಿ.ರಾಠೋಡ, ರಾಜು ಚವ್ಹಾಣ,ಸಂಘದ ಪದಾಧಿಕಾರಿಗಳಾದ ಎಸ್.ಎಸ್.ಪವಾರ, ಪಿ.ಪಿ.ನಾಯಕ, ಸತೀಶ ಚವ್ಹಾಣ, ಪ್ರಭು ಚವ್ಹಾಣ, ಬಾಬು ಜಾಧವ, ರವಿ ಆಡೆ, ಸೇವಂತಾಬಾಯಿ ಚವ್ಹಾಣ, ಪ್ರೇಮಸಿಂಗ್ ಚವ್ಹಾಣ, ಹರಿಶ್ಚಂದ್ರ ರಾಠೋಡ, ಅನ್ನಪೂರ್ಣ ರಾಠೋಡ. ಪ್ರವಿಣ ಪುಣೆ ಮೊದಲಾದವರಿದ್ದರು. ರಾಕೇಶ ಚವ್ಹಾಣ ನಿರೂಪಿಸಿದರು.
=====