ಕ್ರೀಡೆ

ಗ್ವಾಲಿಯರ್​ ಟಿ20ಗೆ ಬಂದ್​ ಬಿಸಿ! ಬಾಂಗ್ಲಾದೇಶ ತಂಡದ ವಿರುದ್ಧ ಹಿಂದು ಮಹಾಸಭಾ ಪ್ರತಿಭಟನೆ

ಗ್ವಾಲಿಯರ್​: ಭಾರತ ಮತ್ತು ಪ್ರವಾಸಿ ಬಾಂಗ್ಲಾದೇಶ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಕಾದಾಟ, ಮಧ್ಯಪ್ರದೇಶದ ಗ್ವಾಲಿಯರ್​ನ ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ ಭಾನುವಾರ ನಿಗದಿಯಾಗಿದೆ. ಆದರೆ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿ, ಅದೇ ದಿನ "ಗ್ವಾಲಿಯರ್​ ಬಂದ್​' ಮಾಡಲು ಹಿಂದು ಮಹಾಸಭಾ ಕರೆ ನೀಡಿದೆ. ಇದು ಪಂದ್ಯಕ್ಕೆ ಹೆಚ್ಚಿನ ತಾಪತ್ರಯ ಉಂಟು ಮಾಡಿದೆ.

ಗ್ವಾಲಿಯರ್​ನಲ್ಲಿ ನಿಗದಿಯಾಗಿರುವ ಪಂದ್ಯವನ್ನು ರದ್ದು ಮಾಡಬೇಕೆಂದು ಹಿಂದು ಮಹಾಸಭಾದ ಉಪಾಧ್ಯಕ್ಷ ಜೈವೀರ್​ ಭಾರಾಧ್ವಾಜ್​, ಕೇಂದ್ರ ಸರ್ಕಾರ ಮತ್ತು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಇಲ್ಲದಿದ್ದರೆ ಪಂದ್ಯದ ದಿನ ಇಡೀ ಗ್ವಾಲಿಯರ್​ ನಗರವನ್ನು ಬಂದ್​ ಮಾಡಿಸುವುದಾಗಿ ಹೇಳಿದ್ದಾರೆ. ಜತೆಗೆ ಪಿಚ್​ ಅಗೆಯುವ ಮೂಲಕ ಪಂದ್ಯ ನಡೆಯದಂತೆ ತಡೆಯುವ ಬೆದರಿಕೆಯನ್ನೂ ಒಡ್ಡಿದ್ದಾರೆ.

ಭಾರತ&ಬಾಂಗ್ಲಾ ತಂಡಗಳು ಬುಧವಾರ ಗ್ವಾಲಿಯರ್​ ಆಗಮಿಸಿದ ಬೆನ್ನಲ್ಲೇ ಹಿಂದು ಮಹಾಸಭಾ ಪ್ರತಿಭಟನೆ ಆರಂಭಿಸಿದ್ದು, ಕಪು$್ಪ ಮತ್ತು ಕೇಸರಿ ಬಣ್ಣದ ಧ್ವಜವನ್ನು ಹಿಡಿದು ಸ್ಟೇಡಿಯಂಗೆ ನುಗ್ಗಲು ಯತ್ನಿಸಿದ 20 ಪ್ರತಿಭಟನಾಕಾರರನ್ನು ಸ್ಥಳಿಯ ಪೊಲೀಸರು ಬಂಧಿಸಿದ್ದಾರೆ.

ಮುಂದಿನ 3 ದಿನ ಪ್ರತಿ ಮನೆ&ಅಂಗಡಿಯ ಬಾಗಿಲಿಗೆ ತೆರಳಿ ಬಂದ್​ ಯಶಸ್ವಿಗೊಳಿಸಲು ಪ್ರಯತ್ನಿಸುತ್ತೇವೆ. ಪಂದ್ಯವನ್ನು ಬಹಿಷ್ಕರಿಸುವಂತೆ ಗ್ವಾಲಿಯರ್​ ನಿವಾಸಿಗಳಿಗೆ ಮನವಿ ಸಲ್ಲಿಸುತ್ತೇವೆ. ಜಿಹಾದಿಗಳಿಂದ ಹಿಂದುಗಳ ಹತ್ಯೆ ನಡೆದ ದೇಶದ ವಿರುದ್ಧ ಪಂದ್ಯ ಆಡುವುದನ್ನು ನಾವು ಒಪ್ಪಿವುದಿಲ್ಲ ಎಂದು ಜೈವೀರ್​ ಭಾರಾಧ್ವಾಜ್​ ಹೇಳಿದ್ದಾರೆ.

ತೆಂಡುಲ್ಕರ್​ ದ್ವಿಶತಕದ ಬಳಿಕ ಮೊದಲ ಪಂದ್ಯ!

ಗ್ವಾಲಿಯರ್​ ಸುಮಾರು 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೊಂದಕ್ಕೆ ಆತಿಥ್ಯ ವಹಿಸಿಕೊಳ್ಳುತ್ತಿದೆ. 2010ರಲ್ಲಿ ಭಾರತ&ದಣ ಆಫ್ರಿಕಾ ನಡುವೆ ಇಲ್ಲಿ ಕೊನೆಯದಾಗಿ ಏಕದಿನ ಪಂದ್ಯವೊಂದು ನಡೆದಿತ್ತು. ಅದರಲ್ಲಿ ದಿಗ್ಗಜ ಸಚಿನ್​ ತೆಂಡುಲ್ಕರ್​ ಏಕದಿನ ಕ್ರಿಕೆಟ್​ನ ಮೊಟ್ಟಮೊದಲ ದ್ವಿಶತಕವೀರ ಎನಿಸಿದ್ದರು.