ಕ್ರೀಡೆ

ಇನ್ನು ಕ್ರಿಕೆಟ್​ ಸ್ಟೇಡಿಯಂಗಳಲ್ಲಿ ತಂಬಾಕು, ಗುಟ್ಕಾ ಜಾಹೀರಾತಿಗೆ ನಿಷೇಧ?

ನವದೆಹಲಿ: ಕ್ರಿಕೆಟ್​ ಸ್ಟೇಡಿಯಂಗಳಲ್ಲಿ ಶ್ರೀವೇ ತಂಬಾಕು, ಪಾನ್​ ಮಸಾಲ ಮತ್ತು ಗುಟ್ಕಾ ಜಾಹೀರಾತುಗಳ ಪ್ರದರ್ಶನಕ್ಕೆ ನಿಷೇಧ ಹೇರುವ ಸಾಧ್ಯತೆಗಳಿವೆ. ದೇಶದೆಲ್ಲೆಡೆ ಎಲ್ಲ ಸ್ಟೇಡಿಯಂಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳ ಹೋರ್ಡಿಂಗ್ಸ್​ ಪ್ರದರ್ಶನವನ್ನು ನಿರ್ಬಂಧಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸಿದೆ. ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿದ ಬೆನ್ನಲ್ಲೇ ಸಚಿವಾಲಯ, ಬಿಸಿಸಿಐಗೆ ಸೂಚನೆ ನೀಡುವ ನಿರೀಕ್ಷೆ ಇದೆ.

"ಕ್ರಿಕೆಟ್​ ಪಂದ್ಯಗಳು ಯುವ ಜನತೆಯಲ್ಲಿ ಅತ್ಯಂತ ಜನಪ್ರಿಯವಾಗಿದೆ. ಕ್ರಿಕೆಟ್​ ಪಂದ್ಯಗಳ ವೇಳೆ ಹೊಗೆರಹಿತ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸಿದ ಹಲವಾರು ದೃಷ್ಟಾಂತಗಳಿವೆ. ಕ್ರಿಕೆಟಿಗರ ಸಹಿತ ಹಲವಾರು ಸೆಲೆಬ್ರಿಟಿಗಳೂ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಯುವ ಜನತೆಯನ್ನು ಪರೋಕ್ಷ$ವಾಗಿ ಆಕರ್ಷಿಸಿದೆ. ಹೀಗಾಗಿ ಕ್ರಿಕೆಟ್​ ಕ್ರೀಡಾಂಗಣಗಳಲ್ಲಿ ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಯಾವುದೇ ರೂಪದಲ್ಲಿ ಪ್ರದರ್ಶಿಸದಂತೆ ಬಿಸಿಸಿಐಗೆ ಆರೋಗ್ಯ ಸಚಿವಾಲಯ ಸೂಚಿಸಲಿದೆ' ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಎಂಆರ್​ ಮತ್ತು ವೈಟಲ್​ ಸ್ಟ್ರಾಟಜೀಸ್​ ನಡೆಸಿದ ಅಧ್ಯಯನದ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನ 17 ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾದ ಜಾಹೀರಾತುಗಳಲ್ಲಿ ಶೇ. 41.3ರಷ್ಟು ಹೊಗೆರಹಿತ ತಂಬಾಕು ಬ್ರಾ$್ಯಂಡ್​ಗಳದ್ದೇ ಆಗಿದ್ದವು. ಭಾರತೀಯ ಸೆಲೆಬ್ರಿಟಿಗಳು ಈ ಹೊಗೆರಹಿತ ತಂಬಾಕು ಉತ್ಪನ್ನಗಳನ್ನು "ಇಲೈಚಿ' ಹೆಸರಿನಲ್ಲಿ ಪ್ರಚಾರ ಮಾಡುತ್ತಿರುವುದು ಕೂಡ ಕಂಡುಬಂದಿದೆ.