ರಜತ್​ ಪಾಟೀದಾರ್​ ಏಜೆನ್ಸಿ
ಕ್ರೀಡೆ

ರೈಸಿಂಗ್​ ಸ್ಟಾರ್ಸ್ ಏಷ್ಯಾಕಪ್​ಗೆ ರಜತ್​ ಪಾಟೀದಾರ್​ ಅಲಭ್ಯ; ಹೀಗಿದೆ ಕಾರಣ...

ಭಾರತ ಎ ತಂಡದಲ್ಲಿ ಬದಲಾವಣೆ; ಬಡೋನಿಗೆ ಸ್ಥಾನ; ರಿಂಕು ಸಿಂಗ್​​ಗೆ ಉಪನಾಯಕನಾಗಿ ಬಡ್ತಿ

ನವದೆಹಲಿ: ನವೆಂಬರ್​ 19ರಿಂದ ಕತಾರ್​ನ ದೋಹಾದಲ್ಲಿ ನಡೆಯಲಿರುವ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಏಕದಿನ ಟೂರ್ನಿಗೆ ಭಾರತ ಎ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದೆ. ತಂಡದ ಉಪನಾಯಕರಾಗಿ ಸ್ಥಾನ ಪಡೆದಿದ್ದ ಆರ್​ಸಿಬಿ ನಾಯಕ ಹಾಗೂ ಮಧ್ಯಪ್ರದೇಶದ ಬ್ಯಾಟರ್​ ರಜತ್​ ಪಾಟೀದಾರ್​ ಗಾಯದಿಂದಾಗಿ ಅಲಭ್ಯರಾಗಿದ್ದಾರೆ.

ಗಾಯದ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿರುವ ಪಾಟೀದಾರ್​, ಏಕದಿನ ಕ್ರಿಕೆಟ್​ ಆಡುವಷ್ಟು ನಾನು ಫಿಟ್​ ಆಗಿಲ್ಲ ಎಂದು ತಿಳಿಸಿದ್ದಾರೆ. ಇದರಿಂದಾಗಿ ಅವರ ಬದಲಿಗೆ ದೆಹಲಿಯ ಬ್ಯಾಟರ್​ ಆಯುಷ್​ ಬಡೋನಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇದೇ ವೇಳೆ ತಂಡದ ಉಪನಾಯಕರಾಗಿ ರಿಂಕು ಸಿಂಗ್​ಗೆ ಬಡ್ತಿ ನೀಡಲಾಗಿದೆ.

ಟೂರ್ನಿಯಲ್ಲಿ ನ.20ಕ್ಕೆ ನೇಪಾಳ ವಿರುದ್ಧ ಅಭಿಯಾನ ಆರಂಭಿಸಲಿರುವ ಭಾರತ ಎ ತಂಡ, ನ.22ಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.