ಸಿಂಗಾಪುರ ಓಪನ್​: ಪಿವಿ ಸಿಂಧು, ಸಾತ್ವಿಕ್​-ಚಿರಾಗ್​ ಗೆಲುವಿನ ಆರಂಭ 
ಬ್ಯಾಡ್ಮಿಂಟನ್

ಸಿಂಗಾಪುರ ಓಪನ್​: ಪಿವಿ ಸಿಂಧು, ಸಾತ್ವಿಕ್​-ಚಿರಾಗ್​ ಗೆಲುವಿನ ಆರಂಭ

ಸಿಂಗಾಪುರ: ಭಾರತದ ಸ್ಟಾರ್​ ಷಟ್ಲರ್​ ಪಿವಿ ಸಿಂಧು (PV Sindhu) ಸಿಂಗಾಪುರ ಓಪನ್​ (Singapore Open) ಸೂಪರ್​-750 ಬ್ಯಾಡ್ಮಿಂಟನ್​ ಟೂರ್ನಿಯ ಮಹಿಳಾ ಸಿಂಗಲ್ಸ್​ ವಿಭಾಗದಲ್ಲಿ ಶುಭಾರಂಭ ಕಂಡಿದ್ದಾರೆ. ಡಬಲ್ಸ್​ ವಿಭಾಗದಲ್ಲಿ ಮಾಜಿ ವಿಶ್ವ ನಂ. 1 ಸಾತ್ವಿಕ್​ ಸಾಯಿರಾಜ್​-ಚಿರಾಗ್​ ಶೆಟ್ಟಿ ಕೂಡ ಗೆಲುವಿನ ಆರಂಭ ಕಂಡಿದೆ. ಆದರೆ ಪುರುಷರ ಸಿಂಗಲ್ಸ್​ನಲ್ಲಿ ಕನ್ನಡಿಗ ಆಯುಷ್​ ಶೆಟ್ಟಿ ಮೊದಲ ಸುತ್ತಿನಲ್ಲೇ ಹೊರಬಿದ್ದರು.
30 ವರ್ಷದ ಸಿಂಧು ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ. 6 ಇಂಡೋನೇಷ್ಯಾದ ಪುತ್ರಿ ಕುಸುಮಾವರ್ದಿನಿ ವಿರುದ್ಧ 21-17, 21-18 ನೇರಗೇಮ್​ಗಳಿಂದ ಗೆಲುವು ಸಾಧಿಸಿದರು.

ಸಾತ್ವಿಕ್​-ಚಿರಾಗ್​ ಜೋಡಿ ವಿಶ್ವ ನಂ. 25 ಮಲೇಷ್ಯಾದ ಚೆನ್​ ಜಿ ಯಿ-ಪ್ರೆಸ್ಲೆ ಸ್ಮಿತ್​ ವಿರುದ್ಧ 26-28, 21-15, 21-13ರಿಂದ ಗೆದ್ದು 2ನೇ ಸುತ್ತಿಗೇರಿತು. ಏಷ್ಯನ್​ ಚಾಂಪಿಯನ್​ಷಿಪ್ ಫೈನಲಿಸ್ಟ್​ ಆಯುಷ್​ ಶೆಟ್ಟಿ 21-11, 14-21, 12-21ರಿಂದ ಮಾಜಿ ವಿಶ್ವ ನಂ. 1 ಡೆನ್ಮಾರ್ಕ್​ ತಾರೆ ವಿಕ್ಟರ್​ ಅಕ್ಸೆಲ್​ಸೆನ್​ಗೆ ಶರಣಾದರು.