ವಿಶ್ವ ಜೂನಿಯರ್ ಸ್ಕ್ವಾಷ್: ಫೈನಲ್ಗೇರಿ ಇತಿಹಾಸ ಬರೆದ ಅನಾಹತ್ ಸಿಂಗ್
ಒಂಟಾರಿಯೊ: ಯುವ ಆಟಗಾರ್ತಿ ಅನಾಹತ್ ಸಿಂಗ್ (Anahat Singh) ವಿಶ್ವ ಜೂನಿಯರ್ ಸ್ಕ್ವಾಷ್ (Squash) ಚಾಂಪಿಯನ್ಷಿಪ್ನಲ್ಲಿ ಕಳೆದ 21 ವರ್ಷಗಳಲ್ಲಿ ಫೈನಲ್ಗೇರಿದ ಮೊದಲ ಭಾರತೀಯರೆನಿಸಿದ್ದಾರೆ. 2005ರಲ್ಲಿ ಕೊನೆಯದಾಗಿ ಜೋಶ್ನಾ ಚಿನ್ನಪ್ಪ ಈ ಸಾಧನೆ ಮಾಡಿದ್ದರು.
ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ದೆಹಲಿಯ ಅನಾಹತ್ 11-3, 8-11, 11-4, 11-6ರಿಂದ ಈಜಿಪ್ಟ್ನ ರ್ಬಬ್ ಸಮೆಹ್ ವಿರುದ್ಧ ಗೆಲುವು ಸಾಧಿಸಿದರು. ವಿಶ್ವ ನಂ. 20 ಅನಾಹತ್, ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಪಟ್ಟವೇರಿದ ಮೊದಲ ಭಾರತೀಯರೆನಿಸುವ ಸಾಧನೆಯಿಂದ ಕೇವಲ 1 ಗೆಲುವು ದೂರದಲ್ಲಿದ್ದಾರೆ.
18 ವರ್ಷದ ಅನಾಹತ್ ಫೈನಲ್ನಲ್ಲಿ 2ನೇ ಶ್ರೇಯಾಂಕಿತೆ ಈಜಿಪ್ಟ್ನ ರುಖಯ್ಯ ಸಲೆಮ್ ವಿರುದ್ಧ ಸೆಣಸಲಿದ್ದಾರೆ. ಅನಾಹತ್ ಹಿಂದಿನ 4 ವಿಶ್ವ ಜೂ. ಸ್ಕ್ವಾಷ್ ಟೂರ್ನಿಗಳಲ್ಲಿ ಸೆಮೀಸ್ ದಾಟಲು ವಿಲರಾಗಿದ್ದರು.