ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್: ಕರ್ನಾಟಕಕ್ಕೆ 2 ಚಿನ್ನ, 4 ಬೆಳ್ಳಿ ಪದಕ
ಬೆಂಗಳೂರು: ಕರ್ನಾಟಕ ತಂಡ ಹೈದರಾಬಾದ್ನಲ್ಲಿ ನಡೆದ 7ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ (National Para Badminton Championship) 2 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಸಹಿತ ಒಟ್ಟು 11 ಪದಕಗಳನ್ನು ಗೆದ್ದುಕೊಂಡಿದೆ.
ಪಲ್ಲವಿ ಎಂ.ಕೆ ಎರಡು ಚಿನ್ನ (ಮಹಿಳಾ ಸಿಂಗಲ್ಸ್, ಡಬಲ್ಸ್ ವಿಭಾಗ), ಒಂದು ಬೆಳ್ಳಿ (ಮಿಶ್ರ ಡಬಲ್ಸ್) ಜಯಿಸಿದರೆ, ಅಮ್ಮು ಮೋಹನ್ ಒಂದು ಬೆಳ್ಳಿ (ಮಹಿಳಾ ಡಬಲ್ಸ್) ಎರಡು ಕಂಚು (ಮಹಿಳಾ ಸಿಂಗಲ್ಸ್, ಮಿಶ್ರ ಡಬಲ್ಸ್) ಗೆದ್ದುಕೊಂಡರು. ದಾನೇಶ್ವರಿ ಒಂದು ಬೆಳ್ಳಿ (ಮಹಿಳಾ ಡಬಲ್ಸ್), ಒಂದು ಕಂಚು (ಮಹಿಳಾ ಸಿಂಗಲ್ಸ್) ಒಲಿಸಿಕೊಂಡರು.
ಜನನಿ ಆರ್. ಒಂದು ಬೆಳ್ಳಿ (ಮಹಿಳಾ ಡಬಲ್ಸ್) ಗೆದ್ದರು. ಸಿದ್ದಣ್ಣ ಸಾಹುಕಾರ್ ಒಂದು ಬೆಳ್ಳಿ (ಪುರುಷರ ಸಿಂಗಲ್ಸ್) ಜಯಿಸಿದರು. ಜಮ್ಶದ್ ಎಂ.ಇ. (ಪುರುಷರ ಡಬಲ್ಸ್), ಮಂಜುನಾಥ್ ಸಿ. (ಪುರುಷರ ಡಬಲ್ಸ್) ತಲಾ ಒಂದು ಕಂಚಿನ ಪದಕ ಗೆದ್ದುಕೊಂಡರು.