ಕ್ರೀಡೆ

ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ಜೋಡಿಯ ಮದುವೆಗೆ ಮುಹೂರ್ತ ಫಿಕ್ಸ್

ಚೆನ್ನೈ: ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳು ನಟ ವಿಷ್ಣು ವಿಶಾಲ್ ಅವರ ವಿವಾಹ ಏಪ್ರಿಲ್ 22ರಂದು ನಡೆಯಲಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಇವರಿಬ್ಬರಿಗೂ ಇದು 2ನೇ ವಿವಾಹವಾಗಿದೆ.

ವಿವಾಹ ಆಮತ್ರಣ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿಷ್ಣು ವಿಶಾಲ್ ದಿನಾಂಕ ಬಹಿರಂಗಪಡಿಸಿದ್ದಾರೆ. 37 ವರ್ಷದ ಜ್ವಾಲಾ ಮತ್ತು 36 ವರ್ಷದ ವಿಶಾಲ್ ಕಳೆದ ಕೆಲ ಸಮಯದಿಂದ ಡೇಟಿಂಗ್‌ನಲ್ಲಿದ್ದರು.

ವಿಷ್ಣು ವಿಶಾಲ್ 2010ರಲ್ಲಿ ರಜಿನಿ ನಟರಾಜ್‌ರನ್ನು ವಿವಾಹವಾಗಿದ್ದರು. 2017ರಲ್ಲಿ ಪುತ್ರ ಜನಿಸಿದ ಬಳಿಕ 2018ರಲ್ಲಿ ವಿಚ್ಛೇದನ ಪಡೆದಿದ್ದರು. ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್‌ರನ್ನು 2005ರಲ್ಲಿ ವಿವಾಹವಾಗಿದ್ದ ಜ್ವಾಲಾ 2011ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಜತೆಗೂ ಇವರ ಹೆಸರು ಕೇಳಿಬಂದಿತ್ತು.