ಕ್ರೀಡೆ

ಫೈನಲ್‌ಗೇರಿ ಹೊಸ ಇತಿಹಾಸ ಬರೆದ ಬ್ಯಾಡ್ಮಿಂಟನ್ ತಂಡ: ಸೆಮಿಫೈನಲ್‌ನಲ್ಲಿ ಕೊರಿಯಾ ಎದುರು ರೋಚಕ ಗೆಲುವು

ಹಾಂಗ್‌ರೆೌ: ಎಚ್‌ಎಸ್ ಪ್ರಣಯ್ ನೇತೃತ್ವದ ಭಾರತದ ಪುರುಷ ಷಟ್ಲರ್‌ಗಳ ತಂಡ ಏಷ್ಯಾಡ್‌ನಲ್ಲಿ ಮೊದಲ ಬಾರಿಗೆ ೈನಲ್‌ಗೇರಿದ ಸಾಧನೆ ಮಾಡಿದ್ದು, ಚಿನ್ನದ ನಿರೀಕ್ಷೆ ಮೂಡಿಸಿದೆ. 37 ವರ್ಷಗಳ ಬಳಿಕ ಪೋಡಿಯಂ ಏರಲು ಸಜ್ಜಾಗಿರುವ ಭಾರತ ತಂಡ ಸೆಮಿೈನಲ್‌ನಲ್ಲಿ ಕೊರಿಯಾ ಎದುರು 3-2ರಿಂದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಏಷ್ಯಾಡ್ ಬ್ಯಾಡ್ಮಿಂಟನ್‌ನಲ್ಲಿ ಭಾರತ ಮೊಟ್ಟಮೊದಲ ಸ್ವರ್ಣ ಪದಕ ಗೆಲ್ಲುವತ್ತ ಮುನ್ನಡೆದಿದೆ.

ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ 18-21, 21-16,21-19 ರಿಂದ ಜಿಹೋನ್ ಹ್ಯುಕ್ ಜಿನ್ ಎದುರು ಕಂಬ್ಯಾಕ್ ಮಾಡುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿದರು. ಡಬಲ್ಸ್ ಪಂದ್ಯದಲ್ಲಿ ವಿಶ್ವ ನಂ.3 ಸಾತ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ ಜೋಡಿ 13-21, 24-26 ನೇರ ಗೇಮ್‌ಗಳಿಂದ ಸಿಯು ಸೆಯುಂಗ್ ಜೆ- ಕಾಂಗ್ ಮಿನ್ಯೂಕ್ ಜೋಡಿಗೆ ಶರಣಾದರು. ಮೂರನೇ ಪಂದ್ಯದಲ್ಲಿ ಲಕ್ಷ್ಯಸೇನ್ 21-7, 21-9ರಿಂದ ಯೂಗ್ಯೂ ಲೀ ಎದುರು ಭರ್ಜರಿ ಪ್ರದರ್ಶನ ನೀಡಿ ಭಾರತಕ್ಕೆ ಮಹತ್ವದ 2-1 ಮುನ್ನಡೆ ಒದಗಿಸಿದರು. ಎರಡನೇ ಡಬಲ್ಸ್‌ನಲ್ಲಿ ಉದಯೋನ್ಮುಖ ಜೋಡಿ ಎಂಆರ್ ಅರ್ಜುನ್-ಧ್ರುವ ಕಪಿಲ 16-21,11-21 ರಿಂದ ಕಿಮ್ ವೊನ್ಹೋ-ಸುಂಗ್ಸೆಂಗ್ ಜೋಡಿಗೆ ಸುಲಭ ತುತ್ತಾಯಿತು. ಇದರೊಂದಿಗೆ ಎರಡು ತಂಡಗಳು 2-2 ರಿಂದ ಸಮಬಲ ಸಾಧಿಸಿದವು.

ಶ್ರೀಕಾಂತ್ ನಿರ್ಣಾಯಕ ಗೆಲುವು

ನಿರ್ಣಾಯಕ ಸಿಂಗಲ್ಸ್ ಪಂದ್ಯದಲ್ಲಿ 2021ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ವಿಜೇತ ಕಿಡಂಬಿ ಶ್ರೀಕಾಂತ್ 12-21, 21-16, 21-14 ರಿಂದ ಚೋ ಜಿಯೋನಿಯೋಪ್ ಎದುರು ರೋಚಕ ಗೆಲುವು ದಾಖಲಿಸುವುದರೊಂದಿಗೆ ಭಾರತಕ್ಕೆ ೈನಲ್ ಸ್ಥಾನ ಖಚಿತಪಡಿಸಿದರು. ಚಿನ್ನದ ಪದಕಕ್ಕಾಗಿ ಭಾನುವಾರ ಆತಿಥೇಯ ಚೀನಾ ಎದುರು ಭಾರತ ಸೆಣಸಲಿದೆ. ಭಾರತ ತಂಡ 1986ರಲ್ಲಿ ಕೊನೆಯದಾಗಿ ಪದಕ ಜಯಿಸಿದ್ದಾಗ ತಂಡದ ಭಾಗವಾಗಿದ್ದ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಹಾಗೂ ವಿಮಲ್ ಕುಮಾರ್ ಬಳಿ ಲಕ್ಷ್ಯಸೇನ್ ತರಬೇತಿ ಪಡೆಯುತ್ತಿದ್ದಾರೆ.