ಮೆಲ್ಬೋರ್ನ್: ವಿಶ್ವ ನಂ.1, ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ ಹಾಗೂ ಅಮೆರಿಕದ ಮ್ಯಾಡಿಸನ್ ಕೀಯ್ಸ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಗುರುವಾರ ನಡೆದ ಸೆಮಿೈನಲ್‌ನಲ್ಲಿ ಸಬಲೆಂಕಾ,11ನೇ ಶ್ರೇಯಾಂಕಿತೆ ಪೌಲಾ ಬಡೋಸ ವಿರುದ್ಧ ಗೆದ್ದರೆ, ಎರಡನೇ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್‌ಗೆ 19ನೇ ಶ್ರೇಯಾಂಕಿತೆ ಕೀಯ್ಸ ಎದುರು ಪರಾಭವಗೊಂಡರು. ಶನಿವಾರ ಫೈನಲ್ ಪಂದ್ಯ ನಿಗದಿಯಾಗಿದೆ.
ರಾಡ್ ಲೇವರ್ ಅರೆನಾದಲ್ಲಿ ನಡೆದ ಗೆಳತಿಯರ ಸೆಮಿೈನಲ್‌ನಲ್ಲಿ ಬೆಲಾರಸ್‌ನ ಸಬಲೆಂಕಾ 6-4, 6-2 ನೇರಸೆಟ್‌ಗಳಿಂದ ಸ್ಪೇನ್‌ನ ಪೌಲಾ ಬಡೋಸ ಎದುರು ಗೆಲುವು ಒಲಿಸಿಕೊಂಡರು. ಇದರೊಂದಿಗೆ ಸತತ ಮೂರನೇ ವರ್ಷವೂ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಸನಿಹಕ್ಕೇರಿದರು. ಮೊದಲ ಸೆಟ್‌ನಲ್ಲಿ 2-0ಯಿಂದ ಮುನ್ನಡೆ ಸಾಧಿಸಿದ ಬಡೋಸ ನಿಕಟ ಪೈಪೋಟಿ ನೀಡಿದರು. ಆದರೆ ಸಬಲೆಂಕಾ ಕಂಬ್ಯಾಕ್ ಎದುರು ಮೊದಲ ಗ್ರಾಂಡ್ ಸ್ಲಾಂ ಸೆಮಿಫೈನಲ್ ಆಡಿದ ಬಡೋಸ ಮೇಲುಗೈ ಸಾಧಿಸಲು ವಿಫಲರಾದರು.
ಈ ಮೂಲಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಅಜೇಯ ಓಟವನ್ನು 20ನೇ ಪಂದ್ಯಕ್ಕೆ ವಿಸ್ತರಿಸಿದರು. ಮೊದಲ ಬಾರಿ ಅಗ್ರ ಶ್ರೇಯಾಂಕಿತೆಯಾಗಿ ಕಣಕ್ಕಿಳಿದಿರುವ 28 ವರ್ಷದ ಸಬಲೆಂಕಾ, 2107ರ ನಂತರ ಸತತ ಮೂರು ಆವೃತ್ತಿಗಳಲ್ಲಿ ಫೈನಲ್‌ಗೇರಿದ ಮೊದಲ ಹಾಗೂ ಕಿರಿಯ ಆಟಗಾರ್ತಿ ಎನಿದರು. ಸೆರೇನಾ ವಿಲಿಯಮ್ಸ್ ಕೊನೆಯದಾಗಿ ಮೂರು ವರ್ಷ ಪ್ರಶಸ್ತಿ ಸುತ್ತಿಗೇರಿದರೆ, 2002ರಲ್ಲಿ ಮಾರ್ಟಿನಾ ಹಿಂಗಿಸ್ ಕಿರಿಯ ಆಟಗಾರ್ತಿ ಎನಿಸಿದ್ದರು. ಸಬಲೆಂಕಾ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರೆ 1999ರ ಬಳಿಕ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನಿಸಲಿದ್ದಾರೆ. ಸಬಲೆಂಕಾ ಇದುವರೆಗೆ ಮೂರು ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ.
ಸ್ವಿಯಾಟೆಕ್‌ಗೆ ಕೀಯ್ಸ ಆಘಾತ
ಎರಡನೇ ಸೆಮೀಸ್‌ನಲ್ಲಿ ಐದು ಗ್ರಾಂಡ್ ಸ್ಲಾಂ ಒಡತಿ ಪೋಲೆಂಡ್‌ನ ಸ್ವಿಯಾಟೆಕ್ 7-5, 1-6, 6-7(8-10) ಟೈ ಬ್ರೇಕರ್‌ನಲ್ಲಿ ರೋಚಕ ಕಾದಾಟದಲ್ಲಿ ಮ್ಯಾಡಿಸನ್ ಕೀಯ್ಸಗೆ ಶರಣಾದರು. ಮೊದಲ ಸೆಟ್ ವಶಪಡಿಸಿಕೊಂಡ ಸ್ವಿಯಾಟೆಕ್ ಎರಡನೇ ಸೆಟ್‌ನಲ್ಲಿ ಹಿನ್ನಡೆ ಕಂಡರು.ಇದರೊಂದಿಗೆ 2 ಗಂಟೆ 35 ನಿಮಿಷ ನಡೆದ ಪಂದ್ಯ ನಿರ್ಣಾಯಕ ಮೂರನೇ ಸೆಟ್ ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. ಮ್ಯಾಚ್ ಪಾಯಿಂಟ್‌ನಿಂದ ಬಚಾವ್ ಆದ ಕೀಯ್ಸ್ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆಯಿಟ್ಟರು. ಇದಕ್ಕೂ ಮುನ್ನ 2022, 2015ರ ಸೆಮೀಸ್‌ನಲ್ಲಿ ನಿರಾಸೆ ಕಂಡಿದ್ದರು. 29 ವರ್ಷದ ಕೀಯ್ಸಗೆ ಇದು ಎರಡನೇ ಗ್ರಾಂಡ್ ಸ್ಲಾಂ ಫೈನಲ್ ಆಗಿದ್ದು, 2017ರ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು.
8. ಮುಕ್ತ ಟೆನಿಸ್ ಯುಗದಲ್ಲಿ ಸತತ ಮೂರು ಆಸ್ಟ್ರೇಲಿಯನ್ ಓಪನ್ ಫೈನಲ್ ಆಡಲಿರುವ 8ನೇ ಆಟಗಾರ್ತಿ ಸಬಲೆಂಕಾ. ಮಾರ್ಗರೇಟ್ ಕೋರ್ಟ್ (1969-1971), ಇವೊನ್ನೆ ಗೊಲಾಗೊಂಗ್ (1971-1977), ಮಾರ್ಟಿನಾ ನವ್ರಾಟಿಲೊವಾ (1981-1983), ಸ್ಟೇಫಿ ಗ್ರ್ಾ (1988-1990), ಮೊನಿಕಾ ಸೆಲೆಸ್ (1991-1993), ಮಾರ್ಟಿನಾ ಹಿಂಗಿಸ್ (1997-1999), ಸೆರೇನಾ (2015-2017) ಹಿಂದಿನ ಸಾಧಕಿಯರು.