ಕ್ರೀಡೆ

ಆಸ್ಟ್ರೇಲಿಯಾ ಬ್ಯಾಸ್ಕೆಟ್ ಬಾಲ್ ತಂಡದ ನಾಯಕನಿಗೆ ‘FIBA ಏಷ್ಯಾ ಅಧ್ಯಕ್ಷರಿಂದ ಪ್ರಶಸ್ತಿ ಪ್ರದಾನ | basketball

basketball; ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಭಾನುವಾರ (ಆ.17) ನಡೆದ ಪುರುಷರ ಬ್ಯಾಸ್ಕೆಟ್ ಬಾಲ್ ಏಷ್ಯಾ ಕಪ್-25ರ ರೋಚಕ ಫೈನಲ್ ಪಂದ್ಯದಲ್ಲಿ ಚೀನಾ ತಂಡದ ವಿರುದ್ಧ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಕಾರ್ಲಾ ಜಾರ್ಜ್ ಅವರಿಗೆ ಅವರಿಗೆ FIBA (ಫೆಡರೇಷನ್ ಇಂಟರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್) ಏಷ್ಯಾ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಅವರು ಟ್ರೋಫಿ ಪ್ರದಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಫಿಬಾ ಅಧ್ಯಕ್ಷ ಶೇಖ್ ಸೌದ್ ಅಲಿ ಅಲ್ ಥಾನಿ, ಪ್ರಧಾನ ಕಾರ್ಯದರ್ಶಿ ಆಂಡ್ರಿಯಾಸ್ ಝಗ್ ಕ್ಲಿಸ್, ಕಾರ್ಯನಿರ್ವಾಹಕ ನಿರ್ದೇಶಕ ಹಗೋಪ್ ಖಝಿರಿಯನ್ ಮತ್ತಿತರರು ಪಾಲ್ಗೊಂಡಿದ್ದರು.