ಕ್ರೀಡೆ

VIDEO | ಬೆಂಗಳೂರಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಕೆಎಲ್ ರಾಹುಲ್ ದಂಪತಿ

ಬೆಂಗಳೂರು: ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಶನಿವಾರ ಬೆಂಗಳೂರಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಪವಿತ್ರ ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಅಥಿಯಾ ಮತ್ತು ರಾಹುಲ್ ಬೆಂಗಳೂರಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಂತನ ಆಶೀರ್ವಾದ ಪಡೆದಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿವೆ. ಇದರಲ್ಲಿ ಅಥಿಯಾ ಮತ್ತು ರಾಹುಲ್ ಭಗವಂತನಿಗೆ ಹೂವು ಅರ್ಪಿಸಿ ನಮನ ಸಲ್ಲಿಸುತ್ತಿರುವುದನ್ನು ಕಾಣಬಹುದು.

ಅಥಿಯಾ ಸಲ್ವಾರ್ ಸೂಟ್ ಧರಿಸಿದ್ದರೆ, ರಾಹುಲ್ ಕ್ಯಾಶುಯಲ್ ಬಿಳಿ ಟಿ-ಶರ್ಟ್ ಮತ್ತು ಪ್ಯಾಂಟ್‌ ಧರಿಸಿದ್ದಾರೆ. ದಂಪತಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.

ಈ ವರ್ಷ ಜನವರಿ 23 ರಂದು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಅಥಿಯಾ ಮತ್ತು ರಾಹುಲ್ ಅವರು ಅದ್ಧೂರಿ ಮದುವೆಯಾಗಿದ್ದಾರೆ. ಇಬ್ಬರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಮಯ ಕೊಡುತ್ತಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ.