ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಚುನಾವಣೆಯಲ್ಲಿ ಮತ ಚಲಾಯಿಸಲು ಅದರ ಅಧ್ಯೆ ಪಿ.ಟಿ. ಉಷಾ ಅವರನ್ನು ಐಸ್ ಹಾಕಿ ಸಂಸ್ಥೆ ನಾಮನಿರ್ದೇಶನ ಮಾಡಿರುವುದನ್ನು ಚುನಾವಣಾಧಿಕಾರಿ ಅಂಗೀಕರಿಸಿದ್ದಾರೆ. ಐಸ್ ಹಾಕಿ ಸಂಸ್ಥೆಯ ಬಣವೊಂದು ಸಲ್ಲಿಸಿದ್ದ ಆಕ್ಷೇಪವನ್ನು ತಿರಸ್ಕರಿಸಲಾಗಿದೆ. ಇದರೊಂದಿಗೆ ಡಿಸೆಂಬರ್ 5ರ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಪಿ.ಟಿ. ಉಷಾ ಅವರು ಸ್ಥಾನ ಪಡೆದಿದ್ದಾರೆ. ಈ ಮೂಲಕ ಐಒಎ ಅಧ್ಯೆಯಾಗಿ ಮರುಆಯ್ಕೆ ಆಗಲು ಅವರು ಸ್ಪರ್ಧಿಸಲು ಕೂಡ ಅವಕಾಶ ಲಭಿಸಿದಂತಾಗಿದೆ.
ಮಾಜಿ ಅಥ್ಲೆಟಿಕ್ಸ್ ತಾರೆಯಾಗಿರುವ ಪಿ.ಟಿ. ಉಷಾ ತನ್ನ ಸದಸ್ಯೆ ಅಲ್ಲ. ಹೀಗಾಗಿ ಐಒಎ ಸಾಮಾನ್ಯ ಸಭೆಯಲ್ಲಿ ತಮ್ಮನ್ನು ಪ್ರತಿನಿಧಿಸಬಾರದು ಎಂದು ಐಸ್ ಹಾಕಿ ಸಂಸ್ಥೆಯ ಬಣವೊಂದು ಡಿ.13ರಂದು ಆಕ್ಷೇಪ ಎತ್ತಿತ್ತು. ಇದಕ್ಕೆ ಪ್ರತಿಯಾಗಿ ಐಸ್ ಹಾಕಿ ಸಂಸ್ಥೆಯು ಪಿ.ಟಿ. ಉಷಾ ತನ್ನ ಸಕ್ರಿಯ ಸದಸ್ಯೆ ಆಗಿದ್ದಾರೆ ಎಂದು ಡಿ.14ಕ್ಕೆ ಸೂಕ್ತ ದಾಖಲೆ ಸಹಿತ ಅಫಿಡವಿತ್ ಸಲ್ಲಿಸಿದೆ. ಇದನ್ನು ಸಮಗ್ರವಾಗಿ ಪರಿಶೀಲಿಸಿದ ಚುನಾವಣಾಧಿಕಾರಿ, ಆಕ್ಷೇಪವನ್ನು ತಿರಸ್ಕರಿಸಿದ್ದಾರೆ.
ಪಿ.ಟಿ. ಉಷಾ ಈ ಮುನ್ನ ಐಒಎನ ಮಹಿಳಾ ವಿಭಾಗದ ನಾಲ್ವರು ಉನ್ನತ ಕ್ರೀಡಾ ಸಾಧಕರ (ಎಸ್ಒಎಂ) ಚುನಾವಣೆಯಲ್ಲಿ ಸೋತಿದ್ದರು. ಇದರಿಂದಾಗಿ ಅವರು ಅಧ್ಯೆಯಾಗಿ ಮರು ಆಯ್ಕೆ ಆಗಲು ಯಾವುದಾದರೂ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ ನಾಮನಿರ್ದೇಶನಗೊಳ್ಳುವುದು ಅಗತ್ಯವಾಗಿತ್ತು. ಇನ್ನು ನ.22-24ಕ್ಕೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಪರಿಶೀಲನೆಯ ಬಳಿಕ ಡಿ.1ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಡಿ.2ಕ್ಕೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗುತ್ತದೆ. ಡಿ.3ಕ್ಕೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ.