ಬೆಂಗಳೂರು: ದೋಹಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಶೂಟರ್‌ಗಳು ಅಮೋಘ ಸಾಧನೆ ಮಾಡಿದ್ದಾರೆ.
ಮಹಿಳೆಯರ 25 ಮೀಟರ್ ಪಿಸ್ತೂಲ್ ಟೀಮ್ ವಿಭಾಗದಲ್ಲಿ ಭಾರತದ ಈಶಾ ಸಿಂಗ್, ಮನು ಭಾಕರ್ ಹಾಗೂ ಕರ್ನಾಟಕದ ಟಿ.ಎಸ್. ದಿವ್ಯಾ ಅವರ ತಂಡ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದೆ.
ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪಾಲಿಗೆ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಕ್ಷಣ. ಈ ಸಾಧನೆಯೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಕ್ಕೆ ಮೊದಲ ಚಿನ್ನದ ಪದಕ ಲಭಿಸಿದ ಹೆಗ್ಗಳಿಕೆ ಟಿ.ಎಸ್. ದಿವ್ಯಾ ಅವರಿಂದ ಒಲಿದಿದೆ.
ಈ ಸಾಧನೆ ಮಾಡಿದ ಹೆಮ್ಮೆಯ ಟಿ.ಎಸ್. ದಿವ್ಯಾ ಅವರಿಗೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.