KKPL 
ಏಷ್ಯನ್​ ಗೇಮ್ಸ್

ಹೊಯ್ಸಳ ಎಂಪೈರ್‌ಗೆ ರೋಚಕ ಗೆಲುವು, ಮೈಸೂರು ತಂಡಕ್ಕೆ ಹ್ಯಾಟ್ರಿಕ್‌ ಜಯ

ಟೈ ಪಂದ್ಯದಲ್ಲಿ ವಿಜಯಪುರಕ್ಕೆ ವೀರೋಚಿತ ಸೋಲು, ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಂಡ ಮಂಗಳೂರು

ಬೆಂಗಳೂರು: ಜಿದ್ದಾಜಿದ್ದಿನ ಹೋರಾಟದ ಬಳಿಕ ಟೈ ಆದ ರೋಚಕ ಪಂದ್ಯದಲ್ಲಿ ಹೊಯ್ಸಳ ಎಂಪೈರ್‌ ಹಾಸನ ತಂಡ ಕರ್ನಾಟಕ ಕಬಡ್ಡಿ ಪ್ರೀಮಿಯರ್‌ ಲೀಗ್‌ನ ತನ್ನ ನಾಲ್ಕನೇ ಪಂದ್ಯದಲ್ಲಿವಿಜಯಪುರ ಲಯನ್ಸ್‌ ತಂಡವನ್ನು 1 ಅಂಕದಿಂದ ಮಣಿಸಿ ಪ್ರಾಬಲ್ಯ ಸಾಧಿಸಿತು. ಈ ಮಧ್ಯೆ, ಮಂಗಳೂರು ಲಯನ್ಸ್‌ ಹಾಗೂ ಮೈಸೂರು ಮಹಾಸೇನೆ ತಂಡಗಳು ಗೆದ್ದು ಬೀಗಿದವು

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿಸೋಮವಾರ ನಡೆದ ಹೊಯ್ಸಳ ಮತ್ತು ಲಯನ್ಸ್‌ ನಡುವಿನ ಮೊದಲ ಪಂದ್ಯ 31-31 ಅಂಕಗಳಿಂದ ಸಮಬಲಗೊಂಡಿತು. ಬಳಿಕ ಫಲಿತಾಂಶಕ್ಕಾಗಿ ನಡೆದ 5 ರೇಡ್‌ಗಳಲ್ಲಿಹೊಯ್ಸಳ 38-37ರಲ್ಲಿರೋಚಕ ಗೆಲುವು ಸಾಧಿಸಿ ಪೂರ್ಣ 5 ಅಂಕಗಳನ್ನು ತನ್ನದಾಗಿಸಿಕೊಂಡಿತು. ಈ ಫಲಿತಾಂಶದೊಂದಿಗೆ ಲೀಗ್‌ನಲ್ಲಿನಾಲ್ಕನೇ ಜಯ ಗಳಿಸಿದ ಹೊಯ್ಸಳ ತಂಡ, ಒಟ್ಟು 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿಅಗ್ರಸ್ಥಾನ ಕಾಯ್ದುಕೊಂಡಿತು. ಅತ್ತ ಪ್ರಬಲ ಹೋರಾಟ ನೀಡಿದ ವಿಜಯಪುರ ಲಯನ್ಸ್‌, ವೀರೋಚಿತ ಸೋಲಿನೊಂದಿಗೆ ಸತತ ಹಾಗೂ ಮೂರನೇ ಸೋಲಿಗೆ ಗುರಿಯಾಯಿತು.

ಪಂದ್ಯದ ಆರಂಭದಿಂದ ಕೊನೆಯವರೆಗೂ ಉಭಯ ತಂಡಗಳು ಮುನ್ನಡೆಗಾಗಿ ಇನ್ನಿಲ್ಲದ ಹೋರಾಟ ನಡೆಸಿದವು. ಒಮ್ಮೆ ಹೊಯ್ಸಳ ತಂಡ ಮುನ್ನಡೆ ಸಾಧಿಸಿದರೆ, ಮತ್ತೊಮ್ಮೆ ವಿಜಯಪುರ ಮೇಲುಗೈ ಸಾಧಿಸಿತು. ಹೀಗೆ ಉಭಯ ಅವಧಿಗಳಲ್ಲಿಸಾಗಿದ ಪಂದ್ಯ ಅಭಿಮಾನಿಗಳಲ್ಲಿಕುತೂಹಲವನ್ನು ತೀವ್ರಗೊಳಿಸಿತು. ಪಂದ್ಯದ ಮೊದಲಾರ್ಧಕ್ಕೆ ವಿಜಯಪುರ ತಂಡ 18 ಅಂಕಗಳನ್ನು ಕಲೆಹಾಕಿದರೆ, ಹಾಸನ ತಂಡ 19 ಅಂಕಗಳಿಸಿ ಅಲ್ಪ ಮುನ್ನಡೆ ಸಾಧಿಸಿತು. ವಿರಾಮದ ನಂತರ ಮುನ್ನಡೆ ಸಾಧಿಸುವ ಗುರಿಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಎರಡೂ ತಂಡಗಳು, ಛಲ ಬಿಡದೆ ಹೋರಾಟ ನಡೆಸಿದವು. ರೇಡಿಂಗ್‌ ಮತ್ತು ಟ್ಯಾಕಲ್‌ನಲ್ಲಿಸಮಬಲದ ಹೋರಾಟ ತೋರಿದ ಎರಡೂ ತಂಡಗಳು ಪೂರ್ಣಾವಧಿಯಲ್ಲಿಡ್ರಾ ಸಾಧಿಸಿದವು. ಹಾಲಿ ಟೂರ್ನಿಯಲ್ಲಿಟೈ ಆದ ಮೊದಲ ಪಂದ್ಯ ಇದು. ಆದರೆ ಹೆಚ್ಚುವರಿ 5 ರೇಡ್‌ಗಳಲ್ಲಿಕೊನೆಯ ಕ್ಷ ಣದ ಒತ್ತಡವನ್ನು ಮೆಟ್ಟಿನಿಂತ ಹಾಸನ ವಿಜಯೋತ್ಸವ ಆಚರಿಸಿತು.

ಮಂಗಳೂರಿಗೆ ಮಣಿದ ಬೆಳಗಾವಿ

ದಿನದ ಎರಡನೇ ಪಂದ್ಯದಲ್ಲಿಸಂಘಟನಾತ್ಮಕ ಪ್ರದರ್ಶನ ತೋರಿದ ಮಂಗಳೂರು ಇಂಡಿಯನ್ಸ್‌ ತಂಡ 37-31 ಅಂಕಗಳ ಅಂತರದಿಂದ ಬೆಳಗಾವಿ ಬುಲ್ಸ್‌ ತಂಡಕ್ಕೆ ಆಘಾತ ನೀಡಿತು. ಇದರೊಂದಿಗೆ ಸತತ ಎರಡು ಸೋಲುಗಳ ನಂತರ ಗೆಲುವಿನ ಹಳಿಗೆ ಮರಳಿದ ಮಂಗಳೂರು, ಲೀಗ್‌ನಲ್ಲಿಎರಡನೇ ಜಯ ಸಾಧಿಸಿತು. ಅತ್ತ ಬೆಳಗಾವಿ ತಂಡ ದ್ವಿತೀಯಾರ್ಧದಲ್ಲಿಚೇತೋಹಾರಿ ಪ್ರದರ್ಶನ ನೀಡಿದ ಹೊರತಾಗಿಯೂ ಸತತ ಎರಡನೇ ಹಾಗೂ ಒಟ್ಟಾರೆ ಮೂರನೇ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ವಿರಾಮಕ್ಕೆ 19-10 ಅಂಕಗಳಿಂದ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದ ಮಂಗಳೂರು ದ್ವಿತೀಯಾರ್ಧದಲ್ಲೂಅದೇ ಲಯವನ್ನು ಮುಂದವರಿಸಿತು. ಆದರೆ ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷಗಳಿರುವಾಗ ತಿರುಗೇಟು ನೀಡಲು ಯತ್ನಿಸಿದ ಬುಲ್ಸ್‌ ಸೋಲಿನ ಅಂತರವನ್ನು 6 ಅಂಕಗಳಿಗೆ ತಗ್ಗಿಸಲಷ್ಟೇ ಶಕ್ತಗೊಂಡಿತು.

ಮೈಸೂರು ತಂಡಕ್ಕೆ ಹ್ಯಾಟ್ರಿಕ್‌ ಜಯ

ದಿನದ ಮೂರನೇ ಪಂದ್ಯದಲ್ಲಿಮೈಸೂರು ಮಹಾಸೇನೆ ತಂಡ 49-22 ಅಂಕಗಳಿಂದ ಬೆಂಗಳೂರು ಬಿಸನ್ಸ್‌ ತಂಡವನ್ನು ಸೋಲಿಸಿತು. ಪೂರ್ವಾರ್ಧಕ್ಕೆ 18-9ರಲ್ಲಿಅಂತರ ಕಾಯ್ದುಕೊಂಡ ಮೈಸೂರು ತಂಡ ಉತ್ತರಾರ್ಧದಲ್ಲಿತನ್ನ ಪ್ರಾಬಲ್ಯವನ್ನು ಮುಂದುವರಿಸಿ ಸುಮಾರು 15ಕ್ಕೆ ಹೆಚ್ಚು ಅಂಕಗಳಿಂದ ಗೆದ್ದು ಬೀಗಿತು. ಹ್ಯಾಟ್ರಿಕ್‌ ಜಯ ಸಾಧಿಸಿದ ಮೈಸೂರು ಒಟ್ಟು 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿಅಗ್ರ ನಾಲ್ಕರಲ್ಲಿಕಾಣಿಸಿಕೊಂಡಿತು.

ಈ ಮಧ್ಯೆ, ದಿನದ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಿಉತ್ತರಕನ್ನಡ ಸ್ಟಾಲಿಯಾನ್ಸ್‌ ತಂಡ 7( 35-28) ಅಂಕಗಳಿಂದ ಚಾಲುಕ್ಯ ಸೇನೆ ಬಾಗಲಕೋಟೆ ತಂಡವನ್ನು ಹಣಿಯಿತು. ಮೊದಲಾರ್ಧಕ್ಕೆ 18-14ರಲ್ಲಿಮೇಲುಗೈ ಸಾಧಿಸಿದ ಉತ್ತರ ಕನ್ನಡ ತಂಡ ದ್ವಿತೀಯ ಅವಧಿಯಲ್ಲಿಪ್ರಭುತ್ವ ಮೆರೆಯಿತು. ಈ ಫಲಿತಾಂಶದೊಂದಿಗೆ 4ನೇ ಜಯ ಗಳಿಸಿದ ಉತ್ತರ ಕನ್ನಡ ತಂಡ ಒಟ್ಟು 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿಎರಡನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಸಂಘಟಿತ ಹೋರಾಟ ನೀಡಲು ವಿಫಲಗೊಂಡ ಚಾಲುಕ್ಯಸೇನೆ ಬಾಗಲಕೋಟೆ ತಂಡ 2ನೇ ಸೋಲಿಗೆ ಗುರಿಯಾಯಿತು.

ಅಕ್ಟೋಬರ್‌ 6ರ ಪಂದ್ಯಗಳು

ಬೆಂಗಳೂರು ಬಿಸನ್ಸ್‌ ಮತ್ತು ವಿಜಯಪುರ ಲಯನ್ಸ್‌(ಸಂಜೆ 6ಕ್ಕೆ), ಬೆಳಗಾವಿ ಬುಲ್ಸ್‌ ಮತ್ತು ಚಾಲುಕ್ಯಸೇನೆ ಬಾಗಲಕೋಟೆ (ಸಂಜೆ 7ಕ್ಕೆ), ಹೊಯ್ಸಳ ಎಂಪೈರ್‌ ಹಾಸನ ಮತ್ತು ಉತ್ತರ ಕನ್ನಡ ಸ್ಟಾಲಿಯಾನ್ಸ್‌(ರಾತ್ರಿ 8ಕ್ಕೆ) ಮತ್ತು ಮೈಸೂರು ಮಹಾಸೇನೆ ಮತ್ತು ಮಂಗಳೂರು ಇಂಡಿಯನ್ಸ್‌ (ರಾತ್ರಿ 9ಕ್ಕೆ)