ಕ್ರೀಡೆ

ಹರ್ಮಾನ್‌ಪ್ರೀತ್ ಬಳಗಕ್ಕೆ ಐತಿಹಾಸಿಕ ಚಿನ್ನ: ರಾಜ್ಯಕ್ಕೆ ಮೊದಲ ಪದಕ ಗೆದ್ದುಕೊಟ್ಟ ರಾಜೇಶ್ವರಿ

ಹಾಂಗ್ಝೌ: ಯುವ ವೇಗಿ ಟಿಟಾಸ್ ಸಧು (6ಕ್ಕೆ 3) ಬಿಗಿ ಬೌಲಿಂಗ್ ದಾಳಿ ಹಾಗೂ ಉಪನಾಯಕಿ ಸ್ಮತಿ ಮಂದನಾ (46) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಭಾರತದ ಮಹಿಳೆಯರ ತಂಡ ಏಷ್ಯನ್ ಗೇಮ್ಸ್ ಕ್ರಿಕೆಟ್ ಸ್ಪರ್ಧೆಯಲ್ಲಿ ಐತಿಹಾಸಿಕ ಸ್ವರ್ಣ ಪದಕ ಒಲಿಸಿಕೊಂಡಿದೆ. ಹರ್ಮಾನ್‌ಪ್ರೀತ್ ಕೌರ್ ಬಳಗ ಸೋಮವಾರ ನಡೆದ ೈನಲ್ ಪಂದ್ಯದಲ್ಲಿ ಶ್ರೀಲಂಕಾ ಎದುರು 19 ರನ್‌ಗಳಿಂದ ಗೆಲುವು ದಾಖಲಿಸಿದೆ. ಏಷ್ಯಾಡ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮೊದಲ ಪದಕ ಇದಾಗಿದೆ. 2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಹರ್ಮಾನ್‌ಪ್ರೀತ್ ಬಳಗ ರಜತ ಪದಕ ಜಯಿಸಿತ್ತು.

ಪಿಂಗ್‌ೆಂಗ್ ಕ್ಯಾಂಪಸ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಚಿನ್ನದ ಪದಕ ಹೋರಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ, ಸ್ಮತಿ ಮಂದನಾ ಹಾಗೂ ಜೆಮೀಮಾ ರೋಡ್ರಿಗಸ್ (42) ಜತೆಯಾಟದ ಲವಾಗಿ 7 ವಿಕೆಟ್‌ಗೆ 116 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಶ್ರೀಲಂಕಾ 8 ವಿಕೆಟ್‌ಗೆ 97 ರನ್‌ಗಳಿಸಲಷ್ಟೇ ಶಕ್ತವಾಯಿತು. ಭಾರತ ಪರ 2ನೇ ಏಕದಿನ ಪಂದ್ಯವನ್ನಾಡಿದ ಟಿಟಾಸ್ ಸಧು, 2ನೇ ಓವರ್‌ನಲ್ಲಿ ಅನುಷ್ಕಾ ಸಂಜೀವನಿ (1), ವಿಶ್ಮಿ ಗುಣರತ್ನೆ (0) ವಿಕೆಟ್ ಕಿತ್ತು ಕಡಿವಾಣ ಹೇರಿದರು. ಹಸಿನಿ ಪೆರೇರಾ (25) ಹಾಗೂ ನಿಲಾಕ್ಷಿ ಡಿ ಸಿಲ್ವ (23) ತುಸು ಪ್ರತಿರೋಧ ತೋರಿದರೂ ಸೋಲಿನ ಅಂತರ ತಗ್ಗಿಸಲಷ್ಟೇ ಸಾಧ್ಯವಾಯಿತು. ಅಂಪೈರ್ ತೀರ್ಪಿನ ಟೀಕೆಗೆ ಐಸಿಸಿಯಿಂದ 2 ಪಂದ್ಯ ನಿಷೇಧಕ್ಕೆ ಒಳಗಾಗಿದ್ದ ಹರ್ಮಾನ್‌ಪ್ರೀತ್ ೈನಲ್‌ನಲ್ಲಿ ಕಣಕ್ಕಿಳಿದು ಸ್ವರ್ಣ ಸಂಭ್ರಮ ಕಂಡರು.

ಭಾರತ: 7 ವಿಕೆಟ್‌ಗೆ 116 (ಸ್ಮತಿ 46, ಶೆಫಾಲಿ 9, ಜೆಮೀಮಾ 42, ರಿಚಾ 9, ಹರ್ಮಾನ್‌ಪ್ರೀತ್ 2, ಉದ್ದೇಶಿಕ ಪ್ರಬೋಧಿನಿ 16ಕ್ಕೆ2, ಸುಗಂಧಿಕ 30ಕ್ಕೆ2, ಇನ್ನೊಕಾ 20ಕ್ಕೆ 2). ಶ್ರೀಲಂಕಾ: 8 ವಿಕೆಟ್‌ಗೆ 97 (ಚಾಮರಿ 12, ಹಸಿನಿ 25, ನಿಲಾಕ್ಷಿ 23, ಓಶಾಡಿ 19,ಕವಿಶಾ 5, ಟಿಟಾಸ್ ಸಧು 6ಕ್ಕೆ3, ರಾಜೇಶ್ವರಿ ಗಾಯಕ್ವಾಡ್ 20ಕ್ಕೆ2).

ಬಾಂಗ್ಲಾದೇಶಕ್ಕೆ ಕಂಚು: ಕಂಚಿನ ಪದಕದ ಸೆಣಸಾಟದಲ್ಲಿ 2 ಬಾರಿಯ ಸ್ವರ್ಣ ವಿಜೇತ ಪಾಕಿಸ್ತಾನ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದ ಬಾಂಗ್ಲಾದೇಶ ಕಂಚಿನ ಪದಕ ಜಯಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 9 ವಿಕೆಟ್‌ಗೆ 64 ರನ್ ಪೇರಿಸಿತು. ಪ್ರತಿಯಾಗಿ ಬಾಂಗ್ಲಾ 18.2 ಓವರ್‌ಗಳಲ್ಲಿ 5 ವಿಕೆಟ್‌ಗೆ 65 ರನ್‌ಗಳಿಸಿ ಜಯ ಕಂಡಿತು. 2010, 2014ರಲ್ಲಿ ಚಿನ್ನ ಜಯಿಸಿದ್ದ ಪಾಕ್ ಈ ಬಾರಿ ಪದಕವಿಲ್ಲದೆ ಬರಿಗೈಯಲ್ಲಿ ಮರಳಿತು.

ರಾಜ್ಯಕ್ಕೆ ಮೊದಲ ಪದಕ ಗೆದ್ದುಕೊಟ್ಟ ರಾಜೇಶ್ವರಿ: ಏಷ್ಯಾಡ್ ಕಣದಲ್ಲಿರುವ ರಾಜ್ಯದ 38 ಕ್ರೀಡಾಪಟುಗಳ ಪೈಕಿ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ಮೊದಲ ಪದಕ ವಿಜೇತೆ ಎನಿಸಿದರು. ಅವರು ಸೋಮವಾರ ಹಾಂಗ್‌ರೆೌನಲ್ಲಿ ಭಾರತ ತಂಡದ ಪರ ಸ್ವರ್ಣ ಗೆದ್ದು ಸಂಭ್ರಮಿಸಿದರು. ವಿಜಯಪುರದ ಸ್ಪಿನ್ನರ್ ರಾಜೇಶ್ವರಿ ೈನಲ್‌ನಲ್ಲಿ 20 ರನ್‌ಗೆ 2 ವಿಕೆಟ್ ಕಬಳಿಸಿ ಗಮನಸೆಳೆದರು.

ನಾಳೆಯಿಂದ ಪುರುಷರ ಕ್ರಿಕೆಟ್:ಏಷ್ಯಾಡ್‌ನಲ್ಲಿ ಪುರುಷರ ವಿಭಾಗದ ಟಿ20 ಕ್ರಿಕೆಟ್ ಸ್ಪರ್ಧೆ ಬುಧವಾರ ಆರಂಭಗೊಳ್ಳಲಿದೆ. ತವರಿನ ವಿಶ್ವಕಪ್ ಕಾರಣದಿಂದಾಗಿ ಭಾರತ, ಋತುರಾಜ್ ಗಾಯಕ್ವಾಡ್ ಸಾರಥ್ಯದ 2ನೇ ಸ್ತರದ ತಂಡವನ್ನು ಕಣಕ್ಕಿಳಿಸಲಿದೆ. ಚಿನ್ನ ಗೆಲ್ಲುವ ೇವರಿಟ್ ಆಗಿರುವ ಭಾರತ ಅಕ್ಟೋಬರ್ 3ರಂದು ಕ್ವಾರ್ಟರ್‌ೈನಲ್ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.