ಹಾಂಗ್‌ರೆೌ: ಅಗ್ರ ಶ್ರೇಯಾಂಕಿತ ತಂಡವಾಗಿ ಕಣಕ್ಕಿಳಿದಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಏಷ್ಯನ್ ಗೇಮ್ಸ್ ಸೆಮಿೈನಲ್ ಪಂದ್ಯದಲ್ಲಿ ಭಾನುವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಮತ್ತೆ ಸ್ಮತಿ ಮಂದನಾ ಸಾರಥ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ ೈನಲ್‌ಗೇರಿದರೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತಗೊಳ್ಳಲಿದೆ.
ಮಲೇಷ್ಯಾ ವಿರುದ್ಧ ಕಾರ್ಟರ್‌ೈನಲ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಆದರೂ, ಉನ್ನತ ರ‌್ಯಾಂಕಿಂಗ್ ಆಧಾರದಲ್ಲಿ ಭಾರತ ಸೆಮಿೈನಲ್‌ಗೆ ಅರ್ಹತೆ ಪಡೆದುಕೊಂಡಿತ್ತು. ಬಾಂಗ್ಲಾದೇಶ ಒಂದೂ ಎಸೆತ ಆಡದೆ 4ರ ಘಟ್ಟಕ್ಕೆ ಪ್ರವೇಶಿಸಿದೆ. ಹಾಂಕಾಂಗ್ ಎದುರಿನ ಅದರ ಪಂದ್ಯವೂ ಮಳೆಯಿಂದ ರದ್ದಾಗಿತ್ತು.
ಬಾಂಗ್ಲಾ ಈ ಹಿಂದೆ 2 ಬಾರಿ ಬೆಳ್ಳಿ ಗೆದ್ದಿದ್ದರೆ, ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಭಾರತ ಕ್ರಿಕೆಟ್ ತಂಡ ಚಿನ್ನ ಪದಕ ಗೆಲ್ಲುವ ೇವರಿಟ್ ಎನಿಸಿದೆ. ಹಿಂದಿನ 5 ಟಿ20 ಮುಖಾಮುಖಿಯಲ್ಲಿ ಭಾರತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮಲೇಷ್ಯಾ ಎದುರು ಶೆಾಲಿ ವರ್ಮ, ಜೆಮೀಮಾ ರೋಡ್ರಿಗಸ್, ರಿಚಾ ೋಷ್ ರನ್ ಕಲೆಹಾಕುವ ಮೂಲಕ ಉತ್ತಮ ಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಉಭಯ ತಂಡಗಳ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಅಂಪೈರ್ ಟೀಕಿಸಿದ್ದಕ್ಕೆ ನಾಯಕಿ ಹರ್ಮಾನ್‌ಪ್ರೀತ್ ಕೌರ್‌ಗೆ ಐಸಿಸಿ 2 ಪಂದ್ಯಗಳ ನಿಷೇಧ ಹೇರಿತ್ತು. ಹೀಗಾಗಿ ೈನಲ್ ಅಥವಾ ಕಂಚಿನ ಹೋರಾಟದಲ್ಲಿ ಮಾತ್ರ ಹರ್ಮಾನ್‌ಪ್ರೀತ್ ಆಡಬಹುದಾಗಿದೆ. ದಿನದ ಇನ್ನೊಂದು ಸೆಮಿೈನಲ್‌ನಲ್ಲಿ ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿಯಾಗಲಿವೆ.
ಆರಂಭ: ಬೆಳಗ್ಗೆ 6.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್