ಭಾರತ_ಕೊರಿಯಾ ಪಂದ್ಯದ ನೋಟ ಏಜೆನ್ಸಿ
ಕ್ರೀಡೆ

ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ: ದಾಖಲೆಯ ಏಳನೇ ಬಾರಿ ಫೈನಲ್​ಗೇರಿದ ಭಾರತ

ಹಾಲಿ ಚಾಂಪಿಯನ್​ ಭಾರತ ತಂಡ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ ಮೂರನೇ ಹಾಗೂ ಒಟ್ಟಾರೆ ಏಳನೇ ಬಾರಿಗೆ ಫೈನಲ್​ ಪ್ರವೇಶಿಸಿದೆ.

ಮೊಹಾಲಿ: ಹಾಲಿ ಚಾಂಪಿಯನ್​ ಭಾರತ ತಂಡ ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ ಮೂರನೇ ಹಾಗೂ ಒಟ್ಟಾರೆ ಏಳನೇ ಬಾರಿಗೆ ಫೈನಲ್​ ಪ್ರವೇಶಿಸಿದೆ. ಗುರುವಾರ ನಡೆಯಲಿರುವ ಪ್ರಶಸ್ತಿ ಕಾದಾಟದಲ್ಲಿ ಜಪಾನ್​ ಸವಾಲು ಎದುರಿಸಲಿದ್ದು, ಹರ್ಮಾನ್​ಪ್ರೀತ್​ ಸಿಂಗ್​ ಪಡೆ ಟ್ರೋಫಿ ಉಳಿಸಿಕೊಳ್ಳುವ ನಿರೀೆ ಹರಡಿದೆ. ಬುಧವಾರ ನಡೆದ ಸೆಮಿಫೈನಲ್​ನಲ್ಲಿ ಗೋಲಿನ ಮಳೆಹರಿಸಿದ ಭಾರತ ತಂಡ 8&1 ಅಂತರದಿಂದ ಕೊರಿಯಾ ಎದುರು ಗೆದ್ದು ಬೀಗಿತು.

ಒಲಿಂಪಿಯನ್​ ಬಲ್ಬೀರ್​ ಸಿಂಗ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಭಾರತ ಹಿಡಿತ ಸಾಧಿಸಿತು. ಶಿಲಾನಂದ್​ ಲಾಕ್ರ (4, 13ನೇ ನಿಮಿಷ), ದಿಲ್​ಪ್ರೀತ್​ ಸಿಂಗ್​ (21, 25ನೇ ನಿಮಿಷ) ತಲಾ ಎರಡು ಗೋಲು ಸಿಡಿಸಿದರೆ, ಹರ್ಮಾನ್​ಪ್ರೀತ್​ (9), ಸುಖ್​ಜೀತ್​ ಸಿಂಗ್​ (21), ಅಂಗದ್​ ಬಿರ್​ ಸಿಂಗ್​ (36) ಹಾಗೂ ವಿವೇಕ್​ ಸಾಗರ್​ ಪ್ರಸಾದ್​ (54) ತಲಾ ಗೋಲುಗಳಿಸಿ ಗೆಲುವಿನ ಅಂತರ ಹಿಗ್ಗಿಸಿದರು. ರೌಂಡ್​ ರಾಬಿನ್​ ಲೀಗ್​ನಲ್ಲೂ 8&0 ರಿಂದ ಭಾರತ, ಕೊರಿಯಾ ತಂಡವನ್ನು ಮಣಿಸಿತ್ತು.

ಜಪಾನ್​ ಎದುರಾಳಿ: ಮೊದಲ ಸೆಮಿಫೈನಲ್​ನಲ್ಲಿ ಜಪಾನ್​ ತಂಡ 5&3 ರಿಂದ ಶೂಟೌಟ್​ನಲ್ಲಿ ಮಲೇಷ್ಯಾ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಪಂದ್ಯ ಗೋಲುರಹಿತವಾಗಿತ್ತು.

7. ಇದುವರೆಗಿನ 9 ಆವೃತ್ತಿಗಳಲ್ಲಿ ಭಾರತ ತಂಡ ಫೈನಲ್​ ಪ್ರವೇಶಿಸಿದ 7ನೇ ದೃಷ್ಟಾಂತ ಇದಾಗಿದೆ. ಇದಕ್ಕೆ ಮುನ್ನ 2011, 2016, 2018 (ಜಂಟಿ), 2023, 2024ರಲ್ಲಿ ಚಾಂಪಿಯನ್​ ಎನಿಸಿದ್ದು, 2012ರಲ್ಲಿ ರನ್ನರ್​ ಅಪ್​ ಆಗಿದೆ.