Asia Cup: ಇಂದು ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಯುಎಇ ತಂಡವನ್ನು ಕೇವಲ 57 ರನ್‌ಗಳಿಗೆ ಅಲೌಟ್ ಆಗಿದೆ. ಭಾರತದ ಪರ ಕುಲ್ದೀಪ್ ಯಾದವ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರೆ, ಶಿವಂ ದುಬೆ ಮೂರು ವಿಕೆಟ್‌ಗಳನ್ನು ಪಡೆದರು. ಅಲ್ಲದೆ, ಏಷ್ಯಾ ಕಪ್ ಟಿ20 ಇತಿಹಾಸದಲ್ಲಿ ಯುಎಇ ತನ್ನ ಅತ್ಯಂತ ಕಡಿಮೆ ಸ್ಕೋರ್ ಅಲೌಟ್ ಆಗಿದೆ.
ಇದು ಏಷ್ಯಾ ಕಪ್ ಟಿ20ಯಲ್ಲಿ ಯಾವುದೇ ತಂಡವು ದಾಖಲಿಸಿದ ಎರಡನೇ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಯುಎಇ 26/0 ರಿಂದ 57 ಕ್ಕೆ ಆಲೌಟ್ ಆಗಿದ್ದರಿಂದ ಭಾರತ ಕೇವಲ 31 ರನ್‌ಗಳ ಅಂತರದಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದುಕೊಂಡಿತು. ಕುಲ್ದೀಪ್ ಯಾದವ್ ಭಾರತದ ಬೌಲಿಂಗ್ ಪ್ರದರ್ಶನವನ್ನು ಮಿಂಚಿದರು. ಒಂದೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದು ಯುಎಇ ಸರ್ವಪತನಕ್ಕೆ ಕಾರಣರಾದರು.
ಒಮಾನ್ ಮತ್ತು ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಒಳಗೊಂಡ ಗ್ರೂಪ್ ಎ ನಲ್ಲಿ ಇದು ಮೊದಲ ಪಂದ್ಯವಾಗಿದೆ.