ಕೊಲಂಬೊ: ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಆಯೋಜಿಸಲಾಗಿದ್ದ 16ನೇ ಆವೃತ್ತಿಯ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ೈನಲ್‌ನಲ್ಲಿ ಲಂಕಾ ಎದುರು 10 ವಿಕೆಟ್‌ಗಳ ಗೆಲುವು ಸಾಧಿಸಿದ ರೋಹಿತ್ ಪಡೆ 8ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು.
ಲಂಕಾದಲ್ಲಿ ಏಷ್ಯಾಕಪ್ ಆಯೋಜನೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ಸಹ ವ್ಯಕ್ತಪಡಿಸಿತ್ತು. ಆದರೆ ಏಷ್ಯಾಕಪ್ ಟೂರ್ನಿಯ ಯಶಸ್ಸಿಗೆ ಸಹಕರಿಸಿದ ಶ್ರೀಲಂಕಾದ ಕೊಲಂಬೊ ಹಾಗೂ ಪಲ್ಲೆಕಿಲೆ ಕ್ರೀಡಾಂಗಣದ ಪಿಚ್ ಕ್ಯುರೆಟರ್ ಮತ್ತು ಗ್ರೌಂಡ್ಸ್‌ಮನ್‌ಗಳಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಷಾ ಬಹುಮಾನ ಮೊತ್ತ ೋಷಿಸುವ ಮೂಲಕ ಗೌರವ ಸೂಚಿಸಿ ದ್ದಾರೆ.
ಹೈ ಬ್ರಿಡ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ 4 ಪಂದ್ಯಗಳು ಪಾಕಿಸ್ತಾನ ಹಾಗೂ ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಆದರೆ ಕೊಲಂಬೊ ಹಾಗೂ ಪಲ್ಲೆಕಿಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಿಗೆ ಮಳೆ ಪದೇ ಪದೆ ಆಡಚಣೆ ಉಂಟುಮಾಡಿತ್ತು. ಇದರ ನಡುವೆಯೂ ಪಂದ್ಯದಲ್ಲಿ ಲಿತಾಂಶ ಹೊರಬರಲೂ ಪಿಚ್ ಕ್ಯುರೆಟರ್ ಮತ್ತು ಮೈದಾನದ ಸಿಬ್ಬಂದಿಗಳು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಇವರ ಪರಿಶ್ರಮವನ್ನು ನಾಯಕ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಸಹ ಶ್ಲಾಘಿಸಿದ್ದರು.
ಭಾರತ ಹಾಗೂ ಶ್ರೀಲಂಕಾ ನಡುವಿನ ೈನಲ್ ಪಂದ್ಯಕ್ಕೂ ಮುನ್ನ ಟೂರ್ನಿಯ ಯಶಸ್ಸಿಗೆ ಸಹಕರಿಸಿದ ಶ್ರೀಲಂಕಾದ ಕೊಲಂಬೊ ಹಾಗೂ ಪಲ್ಲೆಕಿಲೆ ಕ್ರೀಡಾಂಗಣದ ಪಿಚ್ ಕ್ಯುರೆಟರ್ ಮತ್ತು ಗ್ರೌಂಡ್ಸ್‌ಮನ್‌ಗಳಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಜಯ್ ಷಾ 42 ಲಕ್ಷ ರೂಪಾಯಿಗಳ ಬಹುಮಾನ ಮೊತ್ತ ೋಷಿಸಿದರು. ಬಹುಮಾನ ಮೊತ್ತದ ಚೆಕ್‌ನೊಂದಿಗೆ ಮೈದಾನದ ಸಿಬ್ಬಂದಿ ಸೆಲ್ಫಿ ಕ್ಲಿಕಿಸಿಕೊಳ್ಳುತ್ತಿರುವ ಚಿತ್ರಗಳು ಈಗ ವೈರಲ್ ಆಗಿವೆ.