ಕೌಲಾಲಂಪುರ: ಕನ್ನಡತಿ ನಿಕಿ ಪ್ರಸಾದ್ ಸಾರಥ್ಯದ ಭಾರತ ತಂಡ ಚೊಚ್ಚಲ ಆವೃತ್ತಿಯ 19 ವಯೋಮಿತಿ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದೆ. ಆರಂಭಿಕ ಆಟಗಾರ್ತಿ ಗೊಂಗಡಿ ತ್ರಿಷಾ (52 ರನ್, 47 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದಾಟ ಮತ್ತು ಎಡಗೈ ಸ್ಪಿನ್ನರ್ ಆಯುಷಿ ಶುಕ್ಲಾ (17ಕ್ಕೆ 3) ಮಾರಕ ಬೌಲಿಂಗ್ ಬಲದಿಂದ ಭಾರತ ತಂಡ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ 41 ರನ್ಗಳಿಂದ ಗೆಲುವು ದಾಖಲಿಸುವ ಮೂಲಕ ಈ ಸಾಧನೆ ಮಾಡಿದೆ. ಈ ಮೂಲಕ ಭಾರತ ತಂಡ ಮುಂದಿನ ವರ್ಷದ ಕಿರಿಯರ ಟಿ20 ವಿಶ್ವಕಪ್ಗೆ ಭರ್ಜರಿ ಸಿದ್ಧತೆ ನಡೆಸಿದೆ.
ಬಯುಯೆಮಸ್ ಓವಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡ 7 ವಿಕೆಟ್ಗೆ 117 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ನಂತರ ಬೌಲಿಂಗ್ನಲ್ಲಿ ಭಾರತ ದಿಟ್ಟ ತಿರುಗೇಟು ನೀಡಿತು. ಇದರಿಂದ ಬಾಂಗ್ಲಾದೇಶ 18.3 ಓವರ್ಗಳಲ್ಲಿ ಕೇವಲ 76 ರನ್ಗಳಿಗೆ ಸರ್ವಪತನ ಕಂಡು ಶರಣಾಯಿತು. ಬಾಂಗ್ಲಾ 7 ಓವರ್ಗಳಲ್ಲಿ 2 ವಿಕೆಟ್ಗೆ 44 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ ನಂತರ ದಿಢೀರ್ ಕುಸಿತ ಕಂಡು 32 ರನ್ ಅಂತರದಲ್ಲಿ ಕೊನೇ 8 ವಿಕೆಟ್ ಕಳೆದುಕೊಂಡಿತು. ಆಯುಷಿಗೆ ಮತ್ತಿಬ್ಬರು ಎಡಗೈ ಸ್ಪಿನ್ನರ್ಗಳಾದ ಪುರಾಣಿಕಾ ಸಿಸೋಡಿಯಾ (12ಕ್ಕೆ 2) ಮತ್ತು ಸೋನಮ್ ಯಾದವ್ (13ಕ್ಕೆ 2) ಉತ್ತಮ ಸಾಥ್ ನೀಡಿದರು.
ತ್ರಿಷಾ ಅರ್ಧಶತಕದಾಸರೆ
ಭಾರತ ಆರಂಭಿಕ 2 ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿತು. ಆಗ ಗೊಂಗಡಿ ತ್ರಿಷಾ 2ನೇ ವಿಕೆಟ್ಗೆ ನಾಯಕಿ ನಿಕಿ ಪ್ರಸಾದ್ (12) ಜತೆಗೂಡಿ 41 ರನ್ ಜತೆಯಾಟವಾಡಿ ಆಸರೆಯಾದರು. ನಿಕಿ ನಿರ್ಗಮನದ ನಂತರ ತ್ರಿಷಾ ಅರ್ಧಶತಕ ಪೂರೈಸಿದರು. ನಂತರ ಕೊನೆಯಲ್ಲಿ ಮತ್ತೋರ್ವ ಕನ್ನಡತಿ ಮಿಥಿಲಾ ವಿನೋದ್ (17) ಮತ್ತು ಆಯುಷಿ ಶುಕ್ಲಾ (10) ಉಪಯುಕ್ತ ಕೊಡುಗೆ ನೀಡಿ ಮೊತ್ತವನ್ನು 110ರ ಗಡಿ ದಾಟಿಸಿದರು.
ಭಾರತ: 7 ವಿಕೆಟ್ಗೆ 117 (ಜಿ. ತ್ರಿಷಾ 52, ಕಮಲಿನಿ 5, ನಿಕಿ 12, ಮಿಥಿಲಾ 17, ಆಯುಷಿ 10, ರ್ಜನಾ ಇಸ್ಮಿನ್ 31ಕ್ಕೆ 4, ನಿಶಿತಾ 23ಕ್ಕೆ 2), ಬಾಂಗ್ಲಾದೇಶ: 18.3 ಓವರ್ಗಳಲ್ಲಿ 76 (ಹೋಮಿದ 18, ೆರ್ದೌಸ್ 22, ಆಯುಷಿ 17ಕ್ಕೆ 3, ಪಾರುಣಿಕಾ 12ಕ್ಕೆ 2, ಸೋನಮ್ 13ಕ್ಕೆ 2, ಜೋಶಿತಾ 11ಕ್ಕೆ 1). ಪಂದ್ಯಶ್ರೇಷ್ಠ: ಗೊಂಗಡಿ ತ್ರಿಷಾ.
ಅಜೇಯವಾಗಿ ಪ್ರಶಸ್ತಿ ಜಯ
ಭಾರತ ತಂಡ ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದ್ದರೆ, ನೇಪಾಳ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ನಂತರ ಸೂಪರ್-4 ಹಂತದಲ್ಲಿ ಭಾರತ ತಂಡ, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಸೋಲುಣಿಸಿತ್ತು. ೈನಲ್ನಲ್ಲಿ ಮತ್ತೊಮ್ಮೆ ಬಾಂಗ್ಲಾವನ್ನು ಮಣಿಸಿ ಪ್ರಶಸ್ತಿ ಒಲಿಸಿಕೊಂಡಿತು.
ವಿಜೇತ ತಂಡದಲ್ಲಿ ರಾಜ್ಯದ ಇಬ್ಬರು
ಏಷ್ಯಾಕಪ್ ವಿಜೇತರ ಭಾರತ ಕಿರಿಯರ ತಂಡದಲ್ಲಿ ಇಬ್ಬರು ಕನ್ನಡತಿಯರು ಉಪಯುಕ್ತ ಕೊಡುಗೆ ನೀಡಿ ಗಮನಸೆಳೆದರು. 19 ವರ್ಷದ ನಿಕಿ ಪ್ರಸಾದ್ ತಂಡದ ನಾಯಕಿಯೂ ಆಗಿದ್ದರೆ, ಮಿಥಿಲಾ ವಿನೋದ್ ಕೂಡ ಆಲ್ರೌಂಡರ್ ಆಗಿ ಗಮನಸೆಳೆದಿದ್ದಾರೆ. ಇವರಿಬ್ಬರು ಮುಂದಿನ ವರ್ಷ ಜನವರಿ 18ರಿಂದ ೆಬ್ರವರಿ 2ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 19 ವಯೋಮಿತಿ ಮಹಿಳಾ ವಿಶ್ವಕಪ್ಗೂ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀೆ ಇದೆ. ನಿಕಿ ಪ್ರಸಾದ್ ವಿಶ್ವಕಪ್ನಲ್ಲೂ ನಾಯಕಿಯಾಗಿ ಮುಂದುವರಿಯುವ ನಿರೀಕ್ಷೆ ಇದೆ.
*ನಮಗೆ 20 ರನ್ ಕಡಿಮೆ ಆದಂತೆ ಅನಿಸಿತ್ತು. ಆದರೆ ಈ ಪಿಚ್ನಲ್ಲಿ 117 ರನ್ ಉತ್ತಮ ಮೊತ್ತವೆನಿಸಿತು. ನಮ್ಮ ಬೌಲಿಂಗ್ ವಿಭಾಗದ ಮೇಲೆ ವಿಶ್ವಾಸವಿತ್ತು. ನಮ್ಮ ಬೌಲರ್ಗಳು ಮತ್ತು ಫೀಲ್ಡರ್ಗಳು ಅಮೋ ನಿರ್ವಹಣೆ ತೋರಿದರು. ಜಿ. ತ್ರಿಷಾ ಅಪೂರ್ವವಾಗಿ ಬ್ಯಾಟಿಂಗ್ ಮಾಡಿದರು.
| ನಿಕಿ ಪ್ರಸಾದ್, ಭಾರತ ತಂಡದ ನಾಯಕಿ