ಕ್ರೀಡೆ

ಏಷ್ಯಾ ಕಪ್-2025: ಸೂಪರ್ ಓವರ್​ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಟೀಂ ಇಂಡಿಯಾ| Asia Cup

Asia Cup: ಏಷ್ಯಾ ಕಪ್-2025ರ ಅಂತಿಮ ಸೂಪರ್-4 ಪಂದ್ಯದಲ್ಲಿ ರೋಚಕವಾಗಿ ಸೂಪರ್ ಓವರ್​ನಲ್ಲಿ ಶ್ರೀಲಂಕಾ ತಂಡದ ವಿರುದ್ದ ಟೀಂ ಇಂಡಿಯಾ ಗೆಲುವು ಸಾಧಿಸಿದ್ದು, ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿದೆ.

ದುಬೈನಲ್ಲಿ ನಡೆದ ಇಂಡಿಯಾ-ಶ್ರೀಲಂಕಾ ಪಂದ್ಯ ರೋಚಕವಾಗಿತ್ತು. ಪಂದ್ಯಾವಳಿಯ 18ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ಕೆ ಮಾಡಿಕೊಂಡಿದ್ದ ಶ್ರೀಲಂಕಾ, ಟೀಂ ಇಂಡಿಯಾವನ್ನು 20 ಓವರ್‌ಗಳಲ್ಲಿ 5 ವಿಕೆಟ್​ಗಳ 202 ರನ್‌ಗಳಿಗೆ ಕಟ್ಟಿ ಹಾಕಿತು. ಆದರೆ ಅಂತಿಮವಾಗಿ ಸೂಪರ್ ಓವರ್​ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತು.

ಭಾನುವಾರ ನಡೆಯಲಿರುವ ಟೀಂ ಇಂಡಿಯಾ-ಪಾಕಿಸ್ತಾನ ಪಂದ್ಯ ಫೈನಲ್ ಪಂದ್ಯವನ್ನು ನಿರ್ಧರಿಸುವ ಹಿನ್ನೆಲೆ ಈ ಪಂದ್ಯ ಅಂತಹ ಮಹತ್ವವನ್ನು ಪಡೆದಿರಲಿಲ್ಲ. ಆದರೆ ಸೆಕೆಂಡ್ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ಟೀಂ ಇಂಡಿಯಾ ರನ್​​ ಅನ್ನು ಚೇಸ್ ಮಾಡಿತು. ಪಾಥುಮ್ ನಿಸ್ಸಂಕಾ ಮತ್ತು ಕುಸಲ್ ಪೆರೆರಾ ಎರಡನೇ ವಿಕೆಟ್‌ಗೆ 70 ಎಸೆತಗಳಲ್ಲಿ 127 ರನ್‌ಗಳ ಜೊತೆಯಾಟ ನಡೆಸಿ ಕಂಗೆಡಿಸಿದ್ದರು. ಕುಸೆಲಾ ಪೆರರಾ 58 ರನ್ ಗಳಿಸಿ ಔಟಾದರು. ಅಂತಿಮವಾಗಿ ಭಾರತದ ಬೌಲರ್​ಗಳು ಟೈ ಆಗಲು ಕಾರಣರಾದರು.

ಅಂತಿಮವಾಗಿ ಸೂಪರ್ ಓವರ್​ ಕೊಡಲಾಯಿತು. ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ತಂಡ ಕೇವಲ 2 ರನ್ ಗಳಿಸಿತು. ಅಂತಿಮವಾಗಿ ಇಂಡಿಯಾ ಪರ ಬ್ಯಾಟ್ ಮಾಡಿ ನಾಯಕ ಸೂರ್ಯಕುಮಾರ್ ಯಾದವ್ ಮೊದಲ 2 ಎಸೆತಗಳಲ್ಲಿ 3 ರನ್ ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿದರು. (ಏಜೆನ್ಸೀಸ್)