Asia Cup 2025: ಭಾರತ ಕ್ರಿಕೆಟ್ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ 2025 ರ ಏಷ್ಯಾಕಪ್ ಅಭಿಯಾನವನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದ್ದು, ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಮೆನ್ ಇನ್ ಬ್ಲೂ ತಂಡ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಉತ್ತಪ್ಪ, ಭಾರತ ಈ ಟೂರ್ನಿ ಗೆಲ್ಲುವ ನೆಚ್ಚಿನ ತಂಡವಾಗಿದ್ದರು, ಎದುರಾಳಿ ತಂಡದ ಬಗ್ಗೆ ಹಗುರವಾಗಿ ಅಂದಾಜು ಮಾಡುವುದು ಅಪಾಯ ಎಂದಿದ್ದಾರೆ.
ಇದನ್ನೂ ಓದಿ:Shashi Tharoor | ಮತದಾರರ ಪಟ್ಟಿ ಪರಿಷ್ಕರಣೆ, ಜಿಎಸ್ಟಿ ಸುಧಾರಣೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಶಭಾಷ್!
ಆತ್ಮತೃಪ್ತಿ ಎನ್ನುವುದು ಅಪಾಯವಾಗಿದ್ದು, ಆದ್ದರಿಂದ ಪ್ರತಿಯೊಂದು ಪಂದ್ಯದಲ್ಲೂ ಎಚ್ಚರಿಕೆಯಿಂದ ಆಟವಾಡಬೇಕು ಎಂದು ಸಲಹೆ ನೀಡಿದರು. ಆಟಗಾರರ ವಿಷಯದಲ್ಲಿ ತಂಡ ಸಮತೋಲನದಿಂದ ಕೂಡಿದ್ದು, ಎಂತಹ ಸ್ಥಿತಿಯಲ್ಲು ಮೈ ಮರೆಯಬಾರದು ಎಂದರು. 2024 ರ ಟಿ 20 ವಿಶ್ವಕಪ್ ಗೆಲುವಿನ ಆತ್ಮವಿಶ್ವಾಸದಲ್ಲಿದ್ದು, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಆಳವಾದ ಬ್ಯಾಟಿಂಗ್ ಹೊಂದಿದ್ದು, ಭಾರತ ಯುಎಇಯಂತಹ ಹೊಸ ತಂಡಗಳು ಸೇರಿದಂತೆ ಪ್ರತಿಯೊಂದು ಎದುರಾಳಿಗೂ ಸಮಾನ ಗೌರವ ನೀಡಬೇಕೆ ಎಂದು ಉತ್ತಪ್ಪ ಹೇಳಿದರು.
ಮೈದಾನದಲ್ಲಿದ್ದಂತೆ, ಡ್ರೆಸ್ಸಿಂಗ್ ರೂಮ್ನಲ್ಲೂ ಒಗ್ಗಟ್ಟಿನ ಮಹತ್ವ ಹೇಳಿದ ಉತ್ತಪ್ಪ, 2026 ರ ಟಿ 20 ವಿಶ್ವಕಪ್‌ನಲ್ಲಿ ದೃಷ್ಠಿಯಿಂದ ಆಟಗಾರರ ನಡುವೆ ಸ್ಪರ್ಧೆ ಇದ್ದು, ಅಹಂ ಅಥವಾ ಅಭದ್ರತೆಯಿಂದ ಮುಕ್ತವಾಗಿ ಉತ್ತಮ ವಾತಾವರಣದಲ್ಲಿ ಕಾಲ ಕಳೆಯಬೇಕೆಂದರು.
ಭಾರತ ತಂಡ ಅಫ್ಘಾನಿಸ್ತಾನ ತಂಡದ ಬಗ್ಗೆ ಎಚ್ಚರದಿಂದಿರಬೇಕು ಎಂದು ಉತ್ತಪ್ಪ ಎಚ್ಚರಿಸಿದ್ದು, 2024 ರ ಟಿ 20 ವಿಶ್ವಕಪ್‌ನ ಸೆಮಿಫೈನಲ್ ತಲುಪಿದ ನಂತರ ಹೆರಚ್ಚು ಬಲಿಷ್ಟವಾಗಿದೆ ಎಂದರು. ಬೌಲಿಂಗ್ ಮೂಲಕ ಅಫ್ಘಾನ್ ತಂಡ ಹೇಗೆ ಬೇಕಾದರು ಪಂದ್ಯ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದರು.(ಏಜೆನ್ಸೀಸ್)