ಕೊಲಂಬೊ: ವೇಗಿ ಮೊಹಮದ್ ಸಿರಾಜ್ (21ಕ್ಕೆ6) ಏಕದಿನ ಕ್ರಿಕಟ್‌ನಲ್ಲಿ ತೋರಿದ ಶ್ರೇಷ್ಠ ಬೌಲಿಂಗ್ ನಿರ್ವಹಣೆಯ ಲವಾಗಿ ಟೀಮ್ ಇಂಡಿಯಾ 16ನೇ ಆವೃತ್ತಿಯ ಏಷ್ಯಾಕಪ್ ಏಕದಿನ ಟೂರ್ನಿಯ ಚಾಂಪಿಯನ್ ಎನಿಸಿದೆ. ಭಾನುವಾರ ನಡೆದ ೈನಲ್ ಪಂದ್ಯದಲ್ಲಿ ಜಂಟಿ-ಆತಿಥೇಯ ಶ್ರೀಲಂಕಾ ಎದುರು 10 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದ ರೋಹಿತ್ ಶರ್ಮ ಬಳಗ ಪ್ರಶಸ್ತಿ ಎತ್ತಿ ಹಿಡಿಯಿತು. ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಇದು ಟೀಮ್ ಇಂಡಿಯಾದ 8ನೇ ಏಷ್ಯಾಕಪ್ ಟ್ರೋಫಿ ಆಗಿದೆ.
ಸಿರಾಜ್ ಮ್ಯಾಜಿಕ್ ಓವರ್: ಮೊದಲ ಓವರ್‌ನಲ್ಲಿ ಲಂಕಾದ ಕುಸಲ್ ಪೆರೇರ (0) ವಿಕೆಟ್ ಕಬಳಿಸಿ ವೇಗಿ ಜಸ್‌ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಬಳಿಕ ಮೊಹಮದ್ ಸಿರಾಜ್ ದಾಳಿಗೆ ತಬ್ಬಿಬ್ಬಾದ ಲಂಕಾ ಬ್ಯಾಟರ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಸಿರಾಜ್ ಎಸೆದ ಇನಿಂಗ್ಸ್‌ನ 4ನೇ ಓವರ್ ಮೊದಲ ಎಸೆತ ಎದುರಿಸಿದ ಪಥುಮ್ ನಿಸ್ಸಂಕಾ (2) ಸ್ಕೈರ್‌ನಲ್ಲಿದ್ದ ರವೀಂದ್ರ ಜಡೇಜಾಗೆ ಕ್ಯಾಚಿತ್ತರು. ಮೂರನೇ ಎಸೆತದಲ್ಲಿ ಸಧೀರ ಸಮರ ವಿಕ್ರಮ (0)ಎಲ್‌ಬಿ ಬಲೆಗೆ ಬಿದ್ದರು, ಅಂಪೈರ್ ತೀರ್ಪಿಗೆ ಡಿಆರ್‌ಎಸ್ ಮೊರೆ ಹೋದರು ಬಚಾವಾಗಲಿಲ್ಲ. ಪಾಕ್ ವಿರುದ್ಧ ಪಂದ್ಯದಲ್ಲಿ ಲಂಕಾಗೆ ಗೆಲುವು ತಂದುಕೊಟ್ಟಿದ್ದ ಎಡಗೈ ಬ್ಯಾಟರ್ ಚರಿತ್ ಅಸಲಂಕಾ (0) ಖಾತೆ ತೆರೆಯುವ ಮುನ್ನವೇ ಓವರ್‌ನ 4 ಎಸೆತದಲ್ಲಿ ಕವರ್‌ನಲ್ಲಿದ್ದ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿದರು. ಮೊದಲ 4 ಎಸೆತದಲ್ಲಿ ಮೂರು ವಿಕೆಟ್ ಕಬಳಿಸಿ ಲಂಕಾ ಬ್ಯಾಟರ್‌ಗಳನ್ನು ಕೆಂಗೆಡಿಸಿದ ಸಿರಾಜ್, 5ನೇ ಎಸೆತದಲ್ಲಿ ಬೌಂಡರಿ ಬಿಟ್ಟುಕೊಟ್ಟು ಹ್ಯಾಟ್ರಿಕ್‌ನಿಂದ ವಂಚಿತರಾದರು. ಮರು ಎಸೆತದಲ್ಲಿ ಧನಂಜಯ ಡಿ ಸಿಲ್ವ (4) ಬ್ಯಾಟ್‌ನ ಅಂಚಿಗೆ ಮುತ್ತಿಟ್ಟ ಚೆಂಡು ಕೀಪರ್ ರಾಹುಲ್ ಕೈಸೇರಿತು. ಇದರೊಂದಿಗೆ ಲಂಕಾ ಕೇವಲ 15 ರನ್‌ಗಳಿಗೆ 5 ವಿಕೆಟ್ ತಲುಪಿ 50ರ ಗಡಿ ದಾಟುವುದು ದುಸ್ಥರವೆನಿಸಿತು.