ಮುಂಬೈ: ಕ್ರಿಕೆಟ್‌ನಲ್ಲಿ ಮೈದಾನದ ಅಂಪೈರ್ ಯಾವುದಾದರೂ ಅನುಮಾನಾಸ್ಪದ ತೀರ್ಪು ನೀಡಿದಾಗ ಬ್ಯಾಟರ್‌ಗೆ ಅದರ ಬಗ್ಗೆ ಸಮಾಧಾನ ಇಲ್ಲದಿದ್ದಾಗ ತೃತೀಯ ಅಂಪೈರ್‌ಗೆ ಅದನ್ನು ಪರಾಮರ್ಶೆ ನಡೆಸುವಂತೆ ಮನವಿ ಮಾಡಲು ಡಿಆರ್‌ಎಸ್ ನಿಯಮ ಜಾರಿಯಲ್ಲಿದೆ. ಆದರೆ ಕ್ಲೀನ್ ಬೌಲ್ಡ್ ಆದಾಗಲೂ ಡಿಆರ್‌ಎಸ್ ಮೊರೆ ಹೋಗಲು ಸಾಧ್ಯವೇ? ನ್ಯೂಜಿಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನ ಅಜಾಜ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆದ ಅಶ್ವಿನ್, ಡಿಆರ್‌ಎಸ್ ಮೊರೆ ಹೋಗುವ ಮೂಲಕ ಎಲ್ಲರನ್ನೂ ಗಲಿಬಿಲಿಗೊಳಿಸಿದರು!
ಶನಿವಾರ ಭಾರತದ ಇನಿಂಗ್ಸ್‌ನ 72ನೇ ಓವರ್‌ನಲ್ಲಿ ವೃದ್ಧಿಮಾನ್ ಸಾಹ ಔಟಾದ ಬೆನ್ನಲ್ಲೇ ಕ್ರೀಸ್‌ಗೆ ಇಳಿದ ಅಶ್ವಿನ್ ಮೊದಲ ಎಸೆತದಲ್ಲಿ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರೂ, ಅಜಾಜ್ ಪಟೇಲ್ ಅವರ ಎಸೆತ ಅಶ್ವಿನ್‌ರನ್ನು ವಂಚಿಸಿ ಬೌಲ್ಡ್ ಮಾಡಿತು. ಆದರೆ ತಾನು ಬೌಲ್ಡ್ ಆಗಿರುವ ಬಗ್ಗೆ ಗೊತ್ತಿರದೆ ಅಶ್ವಿನ್ ಡಿಆರ್‌ಎಸ್ ಸನ್ನೇ ಮಾಡಿದ್ದರು. ಕೀಪರ್ ಕ್ಯಾಚ್ ನೀಡಿದ್ದಕ್ಕೆ ಅಂಪೈರ್ ಔಟ್ ತೀರ್ಪು ನೀಡಿದ್ದಾರೆಂದು ಅಶ್ವಿನ್ ಡಿಆರ್‌ಎಸ್ ಮೊರೆ ಹೋಗಿದ್ದರು. ಆದರೆ ಬಳಿಕ ತಮ್ಮ ತಪ್ಪಿನ ಅರಿವಾಗಿ ಪೆವಿಲಿಯನ್‌ಗೆ ಮರಳಿದ್ದರು.
ಅಶ್ವಿನ್ ಬೌಲ್ಡಾದರೂ ಡಿಆರ್‌ಎಸ್ ಮೊರೆ ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ನಗೆಪಾಟಲಿಗೆ ಈಡಾಗಿದ್ದು, ಕ್ರಿಕೆಟ್‌ಪ್ರೇಮಿಗಳು ಅವರನ್ನು ಸಖತ್ ಟ್ರೋಲ್ ಮಾಡಿದ್ದಾರೆ. ‘ಬೌಲ್ಡಾದರೂ ಡಿಆರ್‌ಎಸ್ ಮೊರೆ ಹೋದ ಮೊದಲ ಕ್ರಿಕೆಟಿಗ ಅಶ್ವಿನ್’, ಲೆಜೆಂಡ್‌ಗಷ್ಟೇ ಈ ರೀತಿ ಮಾಡಲು ಸಾಧ್ಯ, ‘ಬೌಲ್ಡ್‌ಗೂ ಡಿಆರ್‌ಎಸ್ ಮೊರೆ ಹೋಗುವವರೇ ಅಶ್ವಿನ್’ ಎಂದೆಲ್ಲ ಅಭಿಮಾನಿಗಳು ವಿಡಿಯೋ ಸಮೇತ ಟ್ರೋಲ್ ಮಾಡಿದ್ದಾರೆ. ಅಶ್ವಿನ್ ಕ್ರೀಸ್‌ನಲ್ಲಿ ನೆಲೆಯೂರಲು ಸಿಗುವ ‘ಶೇಕಡ 0.00001’ ಅವಕಾಶವನ್ನೂ ಬಿಡುವುದಿಲ್ಲ ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ. ಅಶ್ವಿನ್ ಡಿಆರ್‌ಎಸ್ ಮೊರೆ ಹೋದಾಗ ‘ನಾಟೌಟ್’ ಆಗಿದ್ದರೆ ಅಜಾಜ್ ಪಟೇಲ್‌ಗೆ ಇನಿಂಗ್ಸ್‌ನ ಎಲ್ಲ 10 ವಿಕೆಟ್ ಸಿಗುವುದನ್ನೂ ತಪ್ಪಿಸಬಹುದಿತ್ತು’ ಎಂದೂ ತಮಾಷೆ ಮಾಡಿದ್ದಾರೆ.