Ashwani Kumar: ಮಾ.31 ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 18ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 16.2 ಓವರ್ ಅಂತ್ಯಕ್ಕೆ 116 ರನ್ ಕಲೆಹಾಕುವ ಮೂಲಕ ಆಲ್ಔಟ್ ಆಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಮುಂಬೈ 8 ವಿಕೆಟ್ಗಳ ಜಯ ಸಾಧಿಸಿ, ಅತ್ಯಂತ ಸುಲಭ ಗೆಲುವನ್ನು ದಾಖಲಿಸಿತು.
ಇದನ್ನೂ ಓದಿ: ಕೆರೆಯಲ್ಲಿ ಖಾಲಿಯಾಗುತ್ತಿರುವ ಜೀವಜಲ > ಮಾನ್ವಿ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ > ಕ್ರಮಕ್ಕೆ ನಿವಾಸಿಗಳ ಆಗ್ರಹ
ಐಪಿಎಲ್ ಪದಾರ್ಪಣೆ ಪಂದ್ಯದಲ್ಲೇ ಅಮೋಘ ಪ್ರದರ್ಶನ ತೋರಿದ ಯುವ ವೇಗಿ ಅಶ್ವನಿ ಕುಮಾರ್, 4 ವಿಕೆಟ್ಗಳನ್ನು ಪಡೆಯುವ ಮೂಲಕ ತಂಡಕ್ಕೆ ಹಾಗೂ ಎದುರಾಳಿಗಳಿಗೆ ತಮ್ಮ ಸಾಮರ್ಥ್ಯವನ್ನು ಪರಿಚಯಿಸಿದರು. ಅಸಲಿಗೆ ಸಿಎಸ್ಕೆ, ಆರ್ಆರ್, ಕೆಕೆಆರ್ ಸೇರಿದಂತೆ ಯಾವ ಫ್ರಾಂಚೈಸಿಗೂ ಬೇಡವಾದ ಅಶ್ವನಿ ಕುಮಾರ್ಗೆ ಸ್ಥಾನ ಕೊಟ್ಟಿದ್ದು ಮುಂಬೈ ಇಂಡಿಯನ್ಸ್. ಐಪಿಎಲ್ ಮೆಗಾ ಹರಾಜಿನಲ್ಲಿ 30 ಲಕ್ಷ ರೂ.ಗೆ ಅಶ್ವನಿಯನ್ನು ಖರೀದಿಸಿದ ಎಂಐ, ಮುಂದೊಂದು ದಿನ ಅವರನ್ನು ಅದ್ಭುತ ಆಟಗಾರನನ್ನಾಗಿ ನೋಡಲು ಭರವಸೆ ವ್ಯಕ್ತಪಡಿಸಿತ್ತು. ಆದರೆ, ಪದಾರ್ಪಣೆಯ ಪಂದ್ಯದಲ್ಲೇ ಅಶ್ವನಿ ಮಿಂಚಿದ್ದು, ಇದೀಗ ಫ್ರಾಂಚೈಸಿ ಭರವಸೆ, ಸಂತಸವನ್ನು ದುಪ್ಪಟ್ಟಾಗಿಸಿದೆ.
ಮೊದಲ ಪಂದ್ಯದಲ್ಲೇ ಸಾಧನೆಯ ಮೈಲಿಗಲ್ಲು ಏರಿದ ಪುತ್ರನನ್ನು ಕಂಡು ಭಾವುಕರಾದ ಅಶ್ವನಿ ತಂದೆ ಹರ್ಕೇಶ್ ಕುಮಾರ್, “ಅವನು ಒಂದೇ ಒಂದು ದಿನ ಕೂಡ ಪಿಸಿಎ ಅಕಾಡೆಮಿಯಲ್ಲಿ ತರಬೇತಿ ಪಡೆಯುವುದನ್ನು ತಪ್ಪಿಸಿಲ್ಲ. ಸೈಕಲ್ ತುಳಿದೇ ಕೋಚಿಂಗ್ ಹೋಗುತ್ತಿದ್ದ. ಇಲ್ಲವೇ ಸಮಯ ಮೀರುತ್ತಿದೆ ಎಂದು ಹಂಚಿಕೆ ಆಟೋ ಪ್ರಯಾಣದ ಮೇಲೆ ಅವಲಂಬಿಸುತ್ತಿದ್ದ. ಆಟೋ ಬೇಕು ಎಂದಾದರೆ ನನ್ನಿಂದ 30 ರೂ. ಪಡೆದು ತೆರಳುತ್ತಿದ್ದ. ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಆತನಿಗೆ 30 ಲಕ್ಷ ರೂ. ಕೊಟ್ಟು ಖರೀದಿಸಿದಾಗ ಬಹಳ ಖುಷಿಯಾಯಿತು. ಏಕೆಂದರೆ, ಆ ಹಣಕ್ಕೆ ನನ್ನ ಮಗ ಅರ್ಹ” ಎಂದಿದ್ದಾರೆ.
ಇದನ್ನೂ ಓದಿ: ಇದಕ್ಕಾಗಿ ಇಷ್ಟು ದಿನ ಸುಮ್ಮನಿದ್ದೆ! ಕಡೆಗೂ ವದಂತಿಗಳ ಕುರಿತು ಮೌನಮುರಿದ ದಿವ್ಯಭಾರತಿ | DivyaBharathi
"ಬಿಸಿಲೇ ಇರಲಿ, ಮಳೆಯೇ ಇರಲಿ ಮಗ ಮಾತ್ರ ಎಂದಿಗೂ ಕ್ರಿಕೆಟ್ ತರಬೇತಿಗೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಅವನಲ್ಲಿ ಆ ಬದ್ಧತೆ ಚೆನ್ನಾಗಿತ್ತು. ರಾತ್ರಿ 10 ಗಂಟೆಗೆ ಕೋಚಿಂಗ್ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದ. ಮತ್ತೇ ಬೆಳಗ್ಗೆ 5 ಗಂಟೆಗೆ ಎದ್ದು ತರಬೇತಿಗೆ ತೆರಳುತ್ತಿದ್ದ. ಅವನಿಗೆ ಟೀಮ್ ಇಂಡಿಯಾದ ಶ್ರೇಷ್ಠ ಬೌಲರ್ ಜಸ್ಪ್ರಿತ್ ಬುಮ್ರಾ ಮತ್ತು ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಎಂದರೆ ಬಹಳ ಅಚ್ಚುಮೆಚ್ಚು" ಎಂದು ಅಶ್ವನಿ ತಂದೆ ಹೇಳಿದ್ದಾರೆ,(ಏಜೆನ್ಸೀಸ್).