ನವದೆಹಲಿ: ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾರತೀಯ ವೇಗಿ ಅರ್ಷ್ದೀಪ್ ಸಿಂಗ್ 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಭರ್ಜರಿ ಬಿಡ್ಡಿಂಗ್ನಲ್ಲಿ ಅಂತಿಮವಾಗಿ ಪಂಜಾಬ್ ಕಿಂಗ್ಸ್ (Punjab Kings) ತಮ್ಮ ತಂಡಕ್ಕೆ ಅರ್ಷ್ದೀಪ್ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ.
ಹರಾಜು ಪ್ರಕ್ರಿಯೆಯಲ್ಲಿ ಹತ್ತು ತಂಡಗಳ ಮಾಲೀಕರು ಭಾಗಿಯಾಗಿದ್ದು, ತಮ್ಮ ಲೆಕ್ಕಾಚಾರಗಳ ಆಟವನ್ನು ವೇದಿಕೆಯಲ್ಲಿ ಪ್ರದರ್ಶಿಸುವಲ್ಲಿ ಸದ್ಯ ನಿರತರಾಗಿದ್ದಾರೆ. ಈ ಪೈಕಿ ಮೊದಲು ಅರ್ಷ್ದೀಪ್ ಸಿಂಗ್ 18 ಕೋಟಿ ರೂ. ಪಂಜಾಬ್ ಕಿಂಗ್ಸ್ ಪಾಲಾದರೆ, ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ 10.75 ಕೋಟಿ ರೂ.ಗೆ ಗುಜರಾತ್ ಟೈಟನ್ಸ್ ಸೇರಿಕೊಂಡರು.