ಮಿಯಾಮಿ ಗಾರ್ಡನ್ಸ್: ಅರ್ಜೆಂಟೀನಾ ತಂಡ ಸತತ ಎರಡನೇ ಬಾರಿಗೆ ದಕ್ಷಿಣ ಅಮೆರಿಕದ ಪ್ರತಿಷ್ಠಿತ ಕೋಪಾ ಅಮೆರಿಕ ುಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿದೆ. ಇದರೊಂದಿಗೆ ದಾಖಲೆಯ 16ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಅಂತಾರಾಷ್ಟ್ರೀಯ ುಟ್‌ಬಾಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಬಳಗಕ್ಕೆ ಇದು ಸತತ 3ನೇ ಮೇಜರ್ ಪ್ರಶಸ್ತಿ ಗೆಲುವಾಗಿದೆ.
ಸೋಮವಾರ ನಡೆದ (ಸ್ಥಳೀಯ ಕಾಲಮಾನ ಭಾನುವಾರ ರಾತ್ರಿ) ೈನಲ್ ಪಂದ್ಯದಲ್ಲಿ ಲೌಟಾರೊ ಮಾರ್ಟಿನೆಜ್ (112ನೇ ನಿಮಿಷ) ಸಿಡಿಸಿದ ಏಕೈಕ ಗೋಲಿನ ಬಲದಿಂದ ಅರ್ಜೆಂಟೀನಾ 1-0 ಅಂತರದಿಂದ ಕೊಲಂಬಿಯಾ ಎದುರು ಗೆದ್ದು ಬೀಗಿದೆ. ಇದು 37 ವರ್ಷದ ಲಿಯೋನೆಲ್ ಮೆಸ್ಸಿಗೆ ಬಹುತೇಕ ಕೊನೆಯ ಕೋಪಾ ಅಮೆರಿಕ ಟೂರ್ನಿ ಎನಿಸಿದ್ದು, ಗೆಲುವಿನ ವಿದಾಯ ಪಡೆದಂತಾಗಿದೆ.
ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ಮುನ್ನ ನಡೆದ ಪ್ರೇಕ್ಷಕರ ನೂಕುನುಗ್ಗಲಿನಿಂದಾಗಿ ಪಂದ್ಯ ಆರಂಭ ವಿಳಂಬಗೊಂಡಿತು. ನಿಗದಿತ 90 ನಿಮಿಷದಲ್ಲಿ ಉಭಯ ತಂಡಗಳು ಗೋಲು ದಾಖಲಿಸದೆ ಉಳಿದವು. ಇದರ ನಡುವೆ ಅರ್ಜೇಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಗಾಯದ ಸಮಸ್ಯೆಗೆ ತುತ್ತಾಗಿ ಅಂಗಣದಿಂದ ಹೊರನಡೆದರು. ಆದರೆ ಮೆಸ್ಸಿ ಗೈರು ಅರ್ಜೆಂಟೀನಾಗೆ ಹಿನ್ನಡೆ ಎನಿಸಲಿಲ್ಲ. 97ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಲೌಟೆರೊ ಮಾರ್ಟಿನೆಜ್ ಅರ್ಜೆಂಟೀನಾ ಗೆಲುವಿನ ರೂವಾರಿ ಎನಿಸಿದರು. ಜತೆಗೆ ರನ್ನರ್ ಅಪ್ ಕೊಲಂಬಿಯಾದ 28 ಪಂದ್ಯಗಳ ಅಜೇಯ ಓಟಕ್ಕೂ ಬ್ರೇಕ್ ಹಾಕಿದರು. ಮಾರ್ಟಿನೆಜ್ಗೆ ಇದು 29ನೇ ಅಂತಾರಾಷ್ಟ್ರೀಯ ಗೋಲಾಗಿದೆ. ಇದಕ್ಕೂ ಮುನ್ನ 75ನೇ ನಿಮಿಷದಲ್ಲಿ ಅರ್ಜೆಂಟೀನಾದ ನಿಕೋಲಸ್ ಟ್ಯಾಗ್ಲಿಯಾಫಿಕೊ ಗೋಲು ಗಳಿಸಿದರು. ಆದರೆ ರೆರಿ ಆಫ್‌ಸೈಡ್ ಎಂದು ತೀರ್ಪು ನೀಡಿದರು.