ಕ್ರೀಡೆ

ರಾಜ್ಯ ಕಿರಿಯರ ತಂಡಕ್ಕೆ ರಾಹುಲ್ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ಉಪನಾಯಕ

ಬೆಂಗಳೂರು: ಡಿಸೆಂಬರ್ 6ರಿಂದ 28ರವರೆಗೆ ವಿಜಯವಾಡದಲ್ಲಿ ನಡೆಯಲಿರುವ 16 ವಯೋಮಿತಿಯ ವಿಜಯ್ ಮರ್ಚೆಂಟ್ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) 16 ಆಟಗಾರರ ರಾಜ್ಯ ತಂಡ ಪ್ರಕಟಿಸಿದೆ. ಧ್ರುವ ಕೃಷ್ಣನ್ ನಾಯಕನಾಗಿ ನೇಮಕಗೊಂಡಿದ್ದು, ಭಾರತ ತಂಡದ ಮಾಜಿ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಉಪನಾಯಕ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಯ್ಕೆಗೊಂಡಿದ್ದಾರೆ. ವಿದರ್ಭ ಎದುರು ಕಣಕ್ಕಿಳಿಯುವ ಮೂಲಕ ಕರ್ನಾಟಕ ತಂಡ ತನ್ನ ಅಭಿಯಾನ ಆರಂಭಿಸಲಿದೆ.

ಕರ್ನಾಟಕ ತಂಡ: ಧ್ರುವ ಕೃಷ್ಣನ್ (ನಾಯಕ), ಅನ್ವಯ್ ದ್ರಾವಿಡ್ (ಉಪನಾಯಕ, ವಿ.ಕೀ), ಶಿವು ಎಂ, ಶ್ಯಮಂತಕ್ ಅನಿರುದ್ಧ್, ಸುಕೃತ್ ಜೆ., ಆರುಷ್ ಜೈನ್, ಅಯಾನ್, ಧ್ಯಾನ್ ಮಹೇಶ್, ಅಥರ್ವ್, ಗೌರವ್, ಗಗನ್ , ಆದಿತ್ಯ ಝಾ, ಸುಜಿತ್,ಆರ್ಯ, ಧ್ರುವ ಮೋದೆ ಹಾಗೂ ಅದ್ರಿತ್ ರಾವ್.