ಬೆಂಗಳೂರು: ಅಕ್ಟೋಬರ್ 16ರಿಂದ ನಡೆಯಲಿರುವ 23 ವಯೋಮಿತಿಯ ಕರ್ನಲ್ ಸಿಕೆ ನಾಯ್ಡು ಟ್ರೋಫಿ ಟೂರ್ನಿಯ ಮೊದಲ ಪಂದ್ಯಕ್ಕೂ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ದಿಗ್ಗಜ ರಾಹುಲ್ ದ್ರಾವಿಡ್ ಹಿರಿಯ ಪುತ್ರ ಸಮಿತ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಅನೀಶ್ವರ್ ಗೌತಮ್ ತಂಡದ ನಾಯಕರಾಗಿದ್ದಾರೆ.
ಕರ್ನಾಟಕ ತಂಡ: ಅನೀಶ್ವರ್ ಗೌತಮ್ (ನಾಯಕ), ಪ್ರಖರ್ ಚತುರ್ವೇದಿ, ಕಾರ್ತಿಕ್ ಎಸ್ಯು, ಜಸ್ಪರ್ ಇಜೆ, ಹರ್ಷಿಲ್ ಧರ್ಮನಿ, ಕೆಪಿ ಕಾರ್ತಿಕೇಯ, ಸಮಿತ್ ದ್ರಾವಿಡ್, ಧ್ರುವ ಪ್ರಭಾಕರ್, ಸಂಜಯ್ ಅಶ್ವಿನ್ (ವಿ.ಕೀ), ಹಾರ್ದಿಕ್ ರಾಜ್, ಯಶೋವರ್ಧನ್ ಪರಂತಾಪ್, ಶಶಿಕುಮಾರ್ ಕೆ, ಮೋನಿಷ್ ರೆಡ್ಡಿ, ಧನುಷ್ ಗೌಡ, ಫೈಜನ್ ಖಾನ್ (ವಿ.ಕೀ). ಕೋಚ್: ಸೋಮಶೇಖರ್ ಶಿರಗುಪ್ಪಿ.
ಅನ್ವಯ್ಗೆ ರಾಜ್ಯ ತಂಡದ ಸಾರಥ್ಯ: ಅಕ್ಟೋಬರ್ 9ರಿಂದ ನಡೆಯಲಿರುವ ವಿನೂ ಮಂಕಡ್ ಟ್ರೋಫಿಯಲ್ಲಿ ದ್ರಾವಿಡ್ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಜತೆಗೆ ಅವರು ತಂಡದ ವಿಕೆಟ್ ಕೀಪರ್ ಕೂಡ ಆಗಿದ್ದಾರೆ.