ಮುಂಬೈ: ಕರ್ವಾ ಚೌತ್ ಪ್ರಯುಕ್ತ ಮುಂಬೈನಲ್ಲಿ ನಡೆದ ಕೃಷ್ಣ ದಾಸ್ ಕೀರ್ತನೆಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli ) ಭಾಗವಹಿಸಿದ್ದಾರೆ. ಈ ಕುರಿತಾದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಬೆಂಗಳೂರಿನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಮುಂಬೈಗೆ ತೆರಳಿದ್ದಾರೆ. ಅಲ್ಲದೆ ಪತ್ನಿ ಅನುಷ್ಕಾ ಶರ್ಮಾ ಜೊತೆ ಕೃಷ್ಣ ದಾಸ್ ಅವರ ಕೀರ್ತನೆಯಲ್ಲಿ ಭಾಗವಹಿಸಿದ್ದಾರೆ. ಕರ್ವಾ ಚೌತ್ ಪ್ರಯುಕ್ತ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕೃಷ್ಣ ದಾಸ್ ಅವರ ಭಕ್ತಿ ಪ್ರಧಾನ ಕೀರ್ತನೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪಾಲ್ಗೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ
ಯೋಗದ ರಾಕ್ ಸ್ಟಾರ್ ಎಂದು ಕರೆಯಲ್ಪಡುವ ಕೃಷ್ಣ ದಾಸ್ ಅವರು ಸಾಂಪ್ರದಾಯಿಕ ಭಾರತೀಯ ಪಠಣವನ್ನು ಆಧುನಿಕ ಸಂಗೀತದೊಂದಿಗೆ ಸಂಯೋಜಿಸಿದ್ದಾರೆ. ದಂಪತಿ ಕೀರ್ತನೆಯನ್ನು ಆನಂದಿಸುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಅನುಷ್ಕಾ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು, ಮತ್ತೊಂದೆಡೆ, ವಿರಾಟ್ ಡೆನಿಮ್‌ಗಳನ್ನು ಧರಿಸಿದ್ದಾರೆ. ಈವೆಂಟ್ನಲ್ಲಿ ದಂಪತಿ ಮುಂದಿನ ಸಾಲಿನಲ್ಲಿ ಕುಳಿತು ಲೈವ್ ಈವೆಂಟ್ ಅನ್ನು ಆನಂದಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡ ಕಾರ್ಯಕ್ರಮದ ಸಂಘಟಕರು, "ಇಂದು ಮುಂಬೈನಲ್ಲಿ ಕೃಷ್ಣ ದಾಸ್ ಲೈವ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ನಮ್ಮೊಂದಿಗೆ ಸೇರಿಕೊಂಡರು'' ಎಂದು ಬರೆದುಕೊಂಡಿದ್ದಾರೆ.
ಕೃಷ್ಣ ದಾಸ್ ಕೀರ್ತನೆಯಲ್ಲಿ ಕೊಹ್ಲಿ ಮತ್ತು ಅನುಷ್ಕಾ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಜುಲೈನಲ್ಲಿ, ದಂಪತಿ ಲಂಡನ್‌ನಲ್ಲಿ ದಾಸ್ ಅವರ ಕೀರ್ತನ್‌ನಲ್ಲಿ ಕಾಣಿಸಿಕೊಂಡರು.