ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಶುಭಮನ್ ಗಿಲ್ ಯಾರಿಗೆ ಗೊತ್ತಿಲ್ಲ ಹೇಳಿ? ಕ್ರಿಕೆಟಿಂಗ್ ಶಾಟ್ಸ್ಗಿಂತಲೂ ಹೆಚ್ಚಾಗಿ ಪ್ರೀತಿ ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಆಟಗಾರ. ಏಕದಿನ ವಿಶ್ವಕಪ್ 2023ರ ಪಂದ್ಯ ಆರಂಭಗೊಂಡ ದಿನದಿಂದಲೂ ಟೀಮ್ ಇಂಡಿಯಾ ಗೆಲುವಿನ ಸುದ್ದಿ ಎಷ್ಟರ ಮಟ್ಟಿಗೆ ಹರಿದಾಡುತ್ತಿತ್ತೋ ಅದಕ್ಕಿಂತ ದುಪ್ಪಟ್ಟು ಇವರಿಬ್ಬರ ಹೆಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿತ್ತು. ಭಾರತ ಆಡುವ ಪ್ರತಿ ಪಂದ್ಯಕ್ಕೂ ಒಂದು ದಿನದ ಹಿಂದೆ ಮತ್ತು ಒಂದು ದಿನದ ಬಳಿಕ ಟ್ರೆಂಡಿಂಗ್ನಲ್ಲಿರುವ ಸಾರಾ ತೆಂಡೂಲ್ಕರ್ ಹಾಗೂ ಶುಭಮನ್ ಗಿಲ್ ಹೆಸರು ಟ್ರೆಂಡಿಂಗ್ ಸಾಲಿನಲ್ಲಿ ಸ್ಥಾನ ಪಡೆಯುತ್ತಿತ್ತು. ಆದ್ರೆ, ಈಗ ಈ ಇಬ್ಬರ ನಡುವೆ ಯಾವುದೇ ಪ್ರೀತಿ-ಪ್ರೇಮದ ಕಥೆಯಿಲ್ಲ ಎಂದು ಹೇಳಲಾಗಿದೆ.
ಇದನ್ನು ಓದಿ: ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ
ಇನ್ನು ಇದೇ ವರ್ಷದ ಮೇ ತಿಂಗಳಲ್ಲಿ ಪುತ್ರಿ ಸಾರಾ ತೆಂಡೂಲ್ಕರ್ ವಿದೇಶಿ ನೆಲದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಪಡೆಯುವ ಮೂಲಕ ಹೆತ್ತವರನ್ನು ಸಂತಸಪಡಿಸಿದರು. ಸಾರಾ ಸಾಧನೆಗೆ ಅನೇಕರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದರು. ಹೆಸರಾಂತ ಕ್ರಿಕೆಟಿಗ ಶುಭಮನ್ ಗಿಲ್ ಜತೆಗೆ ಸಾರಾ ಕದ್ದುಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ, ಇವರಿಬ್ಬರು ಶೀಘ್ರವೇ ಮದುವೆ ಕೂಡ ಆಗಲಿದ್ದಾರೆ ಎಂಬ ವದಂತಿಗಳಿಗೆ ಕಿವಿಗೊಡದ ಸಾರಾ, ಡಿಸ್ಟಿಂಕ್ಷನ್ನಲ್ಲಿ ತಮ್ಮ ಮಾಸ್ಟರ್ಸ್ ಅನ್ನು ಮುಗಿಸಿಕೊಂಡರು. ಈ ಸಾಧನೆ ಮೂಲಕ ಮತ್ತೊಮ್ಮೆ ವದಂತಿಗಳಿಗೆ ತೆರೆ ಎಳೆದರು. ಸದ್ಯ ಪ್ರೀತಿ-ಪ್ರೇಮ ವಿವಾದಗಳಿಂದ ದೂರ ಉಳಿದಿರುವ ಗಿಲ್, ಜಿಂಬಾಬ್ವೆ ವಿರುದ್ಧದ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿ, ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು.
ಇದೀಗ ಮತ್ತೆ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವ ಶುಭಮನ್ ಗಿಲ್, ಬಾಲಿವುಡ್ನ ಬ್ಯೂಟಿ ಅನನ್ಯ ಪಾಂಡೆ ಜತೆ ಇರುವ ಫೋಟೋವೊಂದು ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ. ಗಿಲ್ ಮತ್ತು ಅನನ್ಯ ಒಟ್ಟಿಗಿರುವ ಫೋಟೋ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಶುಭಮನ್ ಜೀವನದಲ್ಲಿ ಮತ್ತೆ ಲವ್ ಆಯಿತಾ? ನಟಿ ಮತ್ತು ಕ್ರಿಕೆಟಿಗನ ಮಧ್ಯೆ ಲವ್ವಿಡವ್ವಿ ಇರಬಹುದೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಆದ್ರೆ, ಅಸಲಿ ಸಂಗತಿ ಬೇರೆಯೇ ಇದೆ. ಇದೊಂದು ಆ್ಯಡ್ ಶೂಟ್ ಆಗಿದ್ದು, ಚಿತ್ರೀಕರಣದ ಸಲುವಾಗಿ ಶುಭಮನ್ ಮತ್ತು ಅನನ್ಯ ಜೋಡಿಯಾಗಿ ಕಂಗೊಳಿಸಿದ್ದಾರೆ,(ಏಜೆನ್ಸೀಸ್).