ಕ್ರೀಡೆ

ಪಂಜಾಬ್​ ಕಿಂಗ್ಸ್​ಗೆ ಇಂದು ಸನ್​ರೈಸರ್ಸ್​ ಸವಾಲು: ಉಭಯ ತಂಡಗಳಿಗೆ ಜಯದ ಓಟ ಕಾಯ್ದುಕೊಳ್ಳುವ ವಿಶ್ವಾಸ

ಮುಲ್ಲನ್​ಪುರ: ಆರಂಭಿಕ ಪಂದ್ಯದ ಬಳಿಕ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರುತ್ತಿರುವ ಪಂಜಾಬ್​ ಕಿಂಗ್ಸ್​ ಹಾಗೂ ಟೂರ್ನಿಯಲ್ಲಿ ದಾಖಲೆಯ ಮೊತ್ತ ಕಲೆಹಾಕಿರುವ ಸನರೈಸರ್ಸ್​ ತಂಡ ಮಂಗಳವಾರ ಐಪಿಎಲ್​&17ನೇ ಆವೃತ್ತಿಯಲ್ಲಿ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಮತ್ತೊಂದು ಜಯದ ನಿರೀೆಯಲ್ಲಿವೆ.

ಎರಡೂ ತಂಡಗಳು ಆಡಿರುವ 4 ಪಂದ್ಯಗಳಲ್ಲಿ 2 ಸೋಲು, 2 ಜಯದೊಂದಿಗೆ 4 ಅಂಕ ಕಲೆಹಾಕಿವೆ. ಉತ್ತಮ ರನರೇಟ್​ ಸರಾಸರಿಯಲ್ಲಿ ಸನರೈಸರ್ಸ್​ ಹೈದರಾಬಾದ್​ ಮೇಲುಗೈ ಸಾಧಿಸಿದೆ.

ಪಂಜಾಬ್​ ಕಿಂಗ್ಸ್​ ಮುಲ್ಲನ್​ಪುರದ ಮಹಾರಾಜ ಯದವೀಂದ್ರ ಸಿಂಗ್​ ಕ್ರೀಡಾಂಗಣವನ್ನು ನೂತನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡು ಲಕ್​ ಬದಲಾಗುವ ನಿರೀಕ್ಷಯಲ್ಲಿದೆ. ಆಡಿದ ಮೊದಲ ಪಂದ್ಯದಲ್ಲಿ ಗೆಲುವು ಕಂಡ ಬಳಿಕ ಆಟಗಾರರ ಅಸ್ಥಿರ ನಿರ್ವಹಣೆ ತಂಡಕ್ಕೆ ಹಿನ್ನಡೆ ತಂದಿದೆ. ಆದರೆ ಹಿಂದಿನ ಪಂದ್ಯದಲ್ಲಿ ಗುಜರಾತ್​ ಎದುರು 200 ರನ್​ ಚೇಸಿಂಗ್​ನಲ್ಲಿ ರೋಚಕ ಗೆಲುವಿನ ಬಳಿಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಇತ್ತ ಸನ್​ರೈಸರ್ಸ್​, ಹಾಲಿ ಚಾಂಪಿಯನ್​ ಸಿಎಸ್​ಕೆ ತಂಡವನ್ನು ಮಣಿಸಿ ಗೆಲುವಿಮ ಹಳಿಗೆ ಮರಳಿದೆ. ತವರಿನ ಅಂಗಣದಲ್ಲಿ ಪಂಜಾಬ್​ ೇವರಿಟ್​ ಎನಿಸಿದರೂ, ಪಂದ್ಯ ಕುತೂಹಲ ಮೂಡಿಸಿದೆ.

ಯುವ ಆಟಗಾರರ ಬಲ : ಪಂಜಾಬ್​ ಕಿಂಗ್ಸ್​ನಲ್ಲಿ ಬಿಗ್​ ಹಿಟ್ಟರ್​ಗಳ ಕೊರತೆಯಿಲ್ಲ. ಆದರೆ ಆಟಗಾರರ ಅಸ್ಥಿರ ನಿರ್ವಹಣೆ ತಂಡಕ್ಕೆ ಹಿನ್ನಡೆ ಎನಿಸಿದೆ. ಶಿಖರ್​ ಧವನ್​ ಅವರಿಂದ ಇದುವರೆಗೆ ನಿರೀತ ರನ್​ ಬಂದಿಲ್ಲ. ಇಂಗ್ಲೆಂಡ್​ನ ಬ್ಯಾಟರ್​ ಜಾನಿ ಬೇರ್​ ಸ್ಟೋ ಟೂರ್ನಿಯಲ್ಲಿ ರನ್​ಬರ ಎದುರಿಸಿದ್ದಾರೆ. ಯುವ ಆಟಗಾರರಿಂದ ಕೂಡಿರುವ ಮಧ್ಯಮ ಕ್ರಮಾಂಕ ಪಂಜಾಬ್​ ಹಿಂದಿನ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಭ್​ ಸಿಮ್ರಾನ್​ ಸಿಂಗ್​, ಶಶಾಂಕ್​ ಸಿಂಗ್​ ಜಿತೇಶ್​ ಶರ್ಮ ಉತ್ತಕ ಕೊಡುಗೆ ನೀಡಿದ್ದಾರೆ. ವಿದೇಶೀ ಆಟಗಾರರಿಂದ ನಿರೀತ ಪ್ರದರ್ಶನ ಮೂಡಿಬಂದಿಲ್ಲ. ಲಿಯಾಮ್​ ಲಿವಿಂಗ್​ಸ್ಟೋನ್​, ಸ್ಯಾಮ್​ ಕರನ್​ ಸ್ಥಿರ ಪ್ರದರ್ಶನ ನೀಡಬೇಕಿದೆ.

ಕಗಿಸೋ ರಬಾಡ್​ ಪಂಜಾಬ್​ನ ಯಶಸ್ವಿ ಬೌಲರ್​ ಎನಿಸಿದ್ದಾರೆ. ಅರ್ಷದೀಪ್​ ಸಿಂಗ್​. ಹರ್ಷಲ್​ ಪಟೇಲ್​ ಸ್ಲಾಗ್​ ಓವರ್​ಗಳಲ್ಲಿ ದುಬಾರಿಯಾಗಿರುವ ಮುಳುವಾಗಿ ಪರಿಣಮಿಸಿದೆ.

ಆತ್ಮವಿಶ್ವಾಸದಲ್ಲಿ ಕಮ್ಮಿನ್ಸ್​ ಪಡೆ: ಸ್ಫೋಟಕ ಬ್ಯಾಟರ್​ಗಳಿಂದ ಕೂಡಿರುವ ಸನ್​ರೈಸರ್ಸ್​ ಹೈದರಾಬಾದ್​ ಸದೃಢ ಬ್ಯಾಟಿಂಗ್​ ವಿಭಾಗ ಹೊಂದಿದೆ. ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​, ಏಡನ್​ ಮಾರ್ಕ್ರಮ್​ ಹಾಗೂ ಹೆನ್ರಿಕ್​ ಕ್ಲಾಸೆನ್​ ಭರ್ಜರಿ ಾಮ್​ರ್ನಲ್ಲಿದ್ದಾರೆ. ಜತೆಗೆ ಅನುಭವಿ ಆಟಗಾರರ ಬಲವಿದೆ. ನಾಯಕ ಪ್ಯಾಟ್​ ಕಮ್ಮಿನ್ಸ್​ ಆಡಿರುವ 4 ಪಂದ್ಯಗಳಲ್ಲಿ 5 ವಿಕೆಟ್​ ಕಬಳಿಸಿದ್ದಾರೆ. ಇವರಿಗೆ ಟಿ. ನಟರಾಜನ್​ ಸಾಥ್​ ನೀಡಿದ್ದಾರೆ. ಅನುಭವಿ ವೇಗಿ ಭುವನೇಶ್ವರ್​ ಕುಮಾರ್​ ಹೊಸ ಚೆಂಡಿನಲ್ಲಿ ದುಬಾರಿ ಎನಿಸಿದ್ದಾರೆ. ಆದರೆ ಹಿಂದಿನ ಐದು ಮುಖಾಮುಖಿಯಲ್ಲಿ 3&2 ಸನ್​ರೈಸರ್ಸ್​ ಮೇಲುಗೈ ಸಾಧಿಸಿದ್ದು ಆತ್ಮವಿಶ್ವಾಸ ಹೆಚ್ಚಿಸಿದೆ.

ಮುಖಾಮುಖಿ: 21

ಪಂಜಾಬ್​: 7

ಸನ್​ರೈಸರ್ಸ್​: 14

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ.