ಮಲಗ(ಸ್ಪೇನ್): ‘ಆವೆಮಣ್ಣಿನ ಅಂಕಣದ ರಾಜ’(ಕ್ಲೇಕೋರ್ಟ್ ಕಿಂಗ್) ಎಂದೇ ಖ್ಯಾತಿ ಪಡೆದಿರುವ ಸ್ಪೇನ್‌ನ ದಿಗ್ಗಜ ರಾೆಲ್ ನಡಾಲ್ ಪರೇರಾ ಟೆನಿಸ್ ವೃತ್ತಿಜೀವನಕ್ಕೆ ಭಾವುಕ ವಿದಾಯ ಹೇಳಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಡೇವಿಸ್ ಕಪ್ ಕ್ವಾರ್ಟರ್ನಫೈಲ್‌ನಲ್ಲಿ ಸ್ಪೇನ್ ತಂಡ 1-2 ರಿಂದ ನೆದರ್ಲೆಂಡ್ ಎದುರು ಪರಾಭವಗೊಂಡಿತು. ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕೊನೇ ಬಾರಿಗೆ ಕಣಕ್ಕಿಳಿದ ರಾಫೆಲ್ ನಡಾಲ್ 6-4, 6-4 ನೇರ ಸೆಟ್‌ಗಳಿಂದ ನೆದರ್ಲೆಂಡ್‌ನ ಬೋಟಿಕ್ ವ್ಯಾನ್ ಡೆ ಝಾಂಡಸ್ಕಾಲ್ ಎದುರು ತವರಿನ ಅಭಿಮಾನಿಗಳ ಎದುರು ಸೋಲುಂಡರು. ಇದರೊಂದಿಗೆ 22 ಗ್ರಾಂಡ್ ಸ್ಲಾಂ ಒಡೆಯ ನಡಾಲ್ ಅವರ 20 ವರ್ಷಗಳ ವರ್ಣರಂಜಿತ ವೃತ್ತಿಜೀವನ ಸೋಲಿನೊಂದಿಗೆ ಕೊನೆಗೊಂಡಿತು.
ರೋಲ್ಯಾಂಡ್ ಗ್ಯಾರಸ್‌ನಲ್ಲಿ 14 ಬಾರಿ ಚಾಂಪಿಯನ್ ಎನಿಸಿರುವ 38 ವರ್ಷದ ರಾೆಲ್ ನಡಾಲ್, ಸತತ ಗಾಯದ ಸಮಸ್ಯೆಯಿಂದಾಗಿ ಡೇವಿಸ್ ಕಪ್ ಬಳಿಕ ಟೆನಿಸ್‌ಗೆ ವಿದಾಯ ಹೇಳುವುದಾಗಿ ಇತ್ತೀಚೆಗೆ ನಿರ್ಧಾರ ಪ್ರಕಟಿಸಿದ್ದರು. ಗಾಯದ ಸಮಸ್ಯೆಯಿಂದ ಮೂರು ತಿಂಗಳು ಸ್ಪರ್ಧಾತ್ಮಕ ಪಂದ್ಯಆಡದಿದ್ದರೂ, ಸ್ಪೇನ್‌ನ ಡೇವಿಸ್ ಕಪ್ ತಂಡದಲ್ಲಿ ನಡಾಲ್‌ಗೆ ಸ್ಥಾನ ಕಲ್ಪಿಸಲಾಗಿತ್ತು. ಪಲಾಸಿಯೊ ಡಿ ಡಿಪೋರ್ಟೆಸ್ ಕ್ರೀಡಾಂಗಣದಲ್ಲಿ ನೆರದಿದ್ದ ಪ್ರೇಕ್ಷಕರ ಚಪ್ಪಾಳೆ ಹಾಗೂ ರಾಫಾ ರಾಫಾ ರಾಫಾ... ಎಂಬ ಉದ್ಗಾರಗಳು ನಡಾಲ್ ಅವರನ್ನು ಭಾವುಕಗೊಳಿಸಿತು.
ಫ್ಚ್ರೆಂಚ್ ಓಪನ್ ಟೂರ್ನಿಯಲ್ಲಿ ಆಡಿದ 116 ಪಂದ್ಯಗಳ ಪೈಕಿ 112ರಲ್ಲಿ ಗೆದ್ದು ಬೀಗಿರುವ ನಡಾಲ್, ಒಂದೇ ಗ್ರಾಂಡ್ ಸ್ಲಾಂ ಪ್ರಶಸ್ತಿಯನ್ನು ಗರಿಷ್ಠ ಬಾರಿ ಜಯಿಸಿರುವ ಏಕೈಕ ಆಟಗಾರ ಎನಿಸಿದ್ದಾರೆ. ಜತೆಗೆ 4 ಬಾರಿ ಯುಎಸ್ ಓಪನ್ ಜಯಿಸಿದರೆ, ತಲಾ ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಎನಿಸಿದ್ದಾರೆ. ಒಲಿಂಪಿಕ್ಸ್ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಅವಳಿ ಸ್ವರ್ಣ ಸಾಧಿಸಿರುವ ನಡಾಲ್, ಡೇವಿಸ್ ಕಪ್‌ನಲ್ಲಿ ಸ್ಪೇನ್ ತಂಡ 4 ಬಾರಿ ಪ್ರಶಸ್ತಿ ಜಯಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು. 209 ವಾರಗಳ ಎಟಿಪಿ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು.
ತನ್ನ 14ನೇ ವಯಸ್ಸಿನಲ್ಲಿಯೇ ಜೂನಿಯರ್ ವಿಭಾಗದಲ್ಲಿ ವೃತ್ತಿಪರ ಟೆನಿಸ್‌ಗೆ ಪದಾರ್ಪಣೆ ಮಾಡಿದ ಎಡಗೈ ಆಟಗಾರ ನಡಾಲ್. ಬಳಿಕ 18ರ ಹರೆಯದಲ್ಲಿ ಡೇವಿಸ್ ಕಪ್ ಗೆದ್ದ ಸ್ಪೇನ್ ತಂಡದ ಸದಸ್ಯನಾಗಿದ್ದರು. 2005ರಲ್ಲಿ ಚೊಚ್ಚಲಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಕಿರೀಟ ಒಲಿಸಿಕೊಂಡ ನಡಾಲ್, ನಂತರ ಯಶಸ್ಸಿನ ಓಟವನ್ನು ವಿಸ್ತರಿಸಿ ಸತತ 4 ವರ್ಷ ಕ್ಲೇಕೋರ್ಟ್‌ನಲ್ಲಿ ಪ್ರಾಬಲ್ಯ ಮೆರೆದರು. ನಡಾಲ್ ಕೊನೆಯದಾಗಿ ಗೆದ್ದ ಪ್ರಶಸ್ತಿಯೂ ್ರೆಂಚ್ ಓಪನ್ ಎನ್ನುವುದು ವಿಶೇಷ. 2022ರಲ್ಲಿ 14ನೇ ಬಾರಿ ಅವರು ಈ ಸಾಧನೆ ಮಾಡಿದರು.
ಹಲವು ತಾರೆಯರ ಶುಭಹಾರೈಕೆ
ನಡಾಲ್ ಅವರ 23 ವರ್ಷಗಳ ಸುದೀರ್ಘ ವೃತ್ತಿಜೀವನದ ವಿದಾಯಕ್ಕೆ ಹಲವು ಕ್ರೀಡಾತಾರೆಯರು ಶುಭಹಾರೈಸಿದ್ದಾರೆ. ಸಾರ್ವಕಾಲಿಕ ಗರಿಷ್ಠ ಗ್ರಾಂಡ್ ಸ್ಲಾಂ ವಿಜೇತ ಸೆರ್ಬಿಯಾದ ನೊವಾಕ್ ಜೋಕೊವಿಕ್, ಸ್ವಿಜರ್ಲೆಂಡ್‌ನ ರೋಜರ್ ಫೆಡರರ್, ಅಮೆರಿಕದ ಸೆರೇನಾ ವಿಲಿಯಮ್ಸ್, ಬ್ರಿಟನ್‌ನ ಆಂಡಿ ಮರ‌್ರೆ, ಫುಟ್‌ಬಾಲ್ ತಾರೆ ಡೇವಿಡ್ ಬೆಕ್ ಹ್ಯಾಮ್, ಗಾಲ್ಘ್ ಆಟಗಾರ ಸೆರ್ಗಿಯೋ ಗಾರ್ಸಿಯಾ ಕಿರು ವೀಡಿಯೊ ಮೂಲಕ ನಡಾಲ್‌ಗೆ ಗೌರವ ಸಲ್ಲಿಸಿದರು.
20. ಡೇವಿಸ್ ಕಪ್‌ನಲ್ಲಿ 20 ವರ್ಷಗಳ ಬಳಿಕ ರಾೆಲ್ ನಡಾಲ್‌ಗೆ ಎದುರಾದ ಮೊದಲ ಒಟ್ಟಾರೆ 2ನೇ ಸೋಲು ಇದಾಗಿದೆ. 2004ರಲ್ಲಿ ಪದಾರ್ಪಣೆಯ ಪಂದ್ಯದಲ್ಲಿ ಪರಾಭವಗೊಂಡಿದ್ದ ನಡಾಲ್, ಬಳಿಕ ಆಡಿದ 29 ಪಂದ್ಯಗಳಲ್ಲಿ ಗೆಲುವಿನ ದಾಖಲೆ ಹೊಂದಿದ್ದರು.
5. ರಾೆಲ್ ನಡಾಲ್ ‘ವೃತ್ತಿಜೀವನದ ಗೋಲ್ಡನ್ ಸ್ಲಾಂ’ ಸಾಧಿಸಿದ ವಿಶ್ವದ ಐವರು ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ.
ಅವರೆಂದರೆ ಸ್ಟೆಫಿ ಗ್ರ್ಾ, ಆಂಡ್ರೆ ಅಗಾಸಿ, ಸೆರೇನಾ ವಿಲಿಯಮ್ಸ್, ರಾೆಲ್ ನಡಾಲ್ ಮತ್ತು ಜೋಕೊವಿಕ್.
ಎಟಿಪಿ ಪ್ರಶಸಿಗಳು : 92
ಗ್ರಾಂಡ್ ಸ್ಲಾಂ ಕಿರೀಟ: 22
ಆಸ್ಟ್ರೇಲಿಯನ್ ಓಪನ್ : (2) 2009,2002.
ಫ್ರೆಂಚ್ ಓಪನ್: (14 ಬಾರಿ) 2005, 2006,2007, 2008, 2010, 2011, 2012, 2013, 2014, 2017, 2018, 2019,2020, 2022.
ವಿಂಬಲ್ಡನ್:(2)2008, 2010
ಯುಎಸ್ ಓಪನ್: (4) 2010, 2013, 2017, 2019
ಒಲಿಂಪಿಕ್ಸ್: 2008ರ ಸಿಂಗಲ್ಸ್ ಹಾಗೂ 2016ರ ಡಬಲ್ಸ್‌ನಲ್ಲಿ ಚಿನ್ನ
ಡೇವಿಸ್ ಕಪ್: (4 ಬಾರಿ) 2004, 2009, 2011, 2019.
ನಾನು ಟೆನಿಸ್ ಆಟ ಆಡಲು ಆಯಾಸಗೊಂಡಿಲ್ಲ. ಆದರೆ ನನ್ನ ದೇಹವೂ ಇನ್ನು ಮುಂದೆ ಆಡಲು ಬಯಸುವುದಿಲ್ಲ. ಆದ್ದರಿಂದ ಈ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕಿದೆ. ನಿಜವಾಗಲೂ ಈ ಕ್ಷಣ ಯಾರಿಗೂ ಬಾರದಿರಲಿ. ಹವ್ಯಾಸವನ್ನು ವೃತ್ತಿಜೀವನವನ್ನಾಗಿಸಿಕೊಂಡು ನನ್ನ ಊಹೆಗಿಂತ ಹೆಚ್ಚು ಸಮಯ ಆಡಿದ್ದಕ್ಕಾಗಿ ತೃಪ್ತಿಹೊಂದಿದ್ದೇನೆ.
ರಾೆಲ್ ನಡಾಲ್.