ಕ್ರೀಡೆ

NZ ಸರಣಿ ಸೋಲಿನ ಹಿನ್ನಡೆಯ ನಡುವೆಯೇ Gautam Gambhir ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶಾರುಖ್​ ಖಾನ್​

ಮುಂಬೈ: ನೂತನ ಕೋಚ್​ ಗೌತಮ್​ ಗಂಭೀರ್​ (Gautam Gambhir) ಸಾರಥ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ವೈಟ್​ವಾಷ್​ ಆಗುವ ಮೂಲಕ ಟೀಮ್​ ಇಂಡಿಯಾ (Team India) ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡ್ಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಇನ್ನೂ ಟೀಮ್​ ಇಂಡಿಯಾ ಕೋಚ್​ ಗೌತಮ್​ ಗಂಭೀರ್​ (Gautam Gambhir) ವಿರುದ್ಧ ಕಿಡಿಕಾರುತ್ತಿದ್ದು, ಇವರನ್ನು ಕೋಚ್​ ಸ್ಥಾನದಿಂದ ಕೆಳಗಿಳಿಸುವಂತೆ ಕ್ರೀಡಾಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಬಾಲಿವುಡ್​ ನಟ ಶಾರುಖ್​ ಖಾನ್​ (Shahrukh Khan) ಕುರಿತು ಮಾಡಿರುವ ಪೋಸ್ಟ್​ ಸಖತ್​ ವೈರಲ್​ ಆಗುತ್ತಿದೆ.

ನವೆಂಬರ್​ 02ರಂದು ಬಾಲಿವುಡ್​ ನಟ ಶಾರುಖ್​ ಖಾನ್​ 59ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಮ್ಮ ಶಕ್ತಿ, ವರ್ಚಸ್ಸು ಮತ್ತು ಮೋಡಿ ಪ್ರತಿ ವರ್ಷ ಹೆಚ್ಚು ತಾರುಣ್ಯವನ್ನು ಪಡೆಯುತ್ತದೆ! ಹೀಗಿ ಶಾಶ್ವತವಾಗಿ ಪ್ರೀತಿಯನ್ನು ಹರಡುತ್ತಿರಿ ಎಂದು ಗೌತಮ್​ ಗಂಭೀರ್​ ( Gautam Gambhir ) ಪೋಸ್ಟ್​ ಮಾಡಿದ್ದರು. ಈ ಪೋಸ್ಟ್​ ಸಖತ್​ ವೈರಲ್​ ಆಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್​, ನಾನು ಇನ್ನೂ ಚಿಕ್ಕವನಾಗಿದ್ದೇನೆ ಎಂದು ಭಾವಿಸಿದೆ. ನಿಮ್ಮ ಸ್ಫರ್ತಿಗಾಗಿ ಧನ್ಯವಾದಗಳು GG (Gautam Gambhir) ಶಾಶ್ವತವಾಗಿ ನಮ್ಮ ಕ್ಯಾಪ್ಟನ್​ ಲವ್​ ಯೂ ಎಂದು ರಿಪ್ಲೈ ಮಾಡಿದ್ದಾರೆ.

ಟೀಮ್​ ಇಂಡಿಯಾದ ನೂತನ ಕೋಚ್​ ಆಗಿ ಗೌತಮ್​ ಗಂಭೀರ್​ ಅಧಿಕಾರ ವಹಿಸಿಕೊಂಡ ಬಳಿಕ ತಂಡ ಸಿಹಿಗಿಂತ ಕಹಿ ಲಭಿಸಿದ್ದೆ ಹೆಚ್ಚು ಎಂದರೆ ತಪ್ಪಾಗಲಾರದು. ಕೋಚ್​ ಆಗಿ ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಭಾರತ ತಂಡ ಹೀನಾಯವಾಗಿ ಸೋತಿತ್ತು. ಇದಾದ ಬಳಿಕ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ತಂಡ ಕಮ್​ಬ್ಯಾಕ್​ ಮಾಡಿತ್ತಾದರು ಇದೀಗ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಇದೆಲ್ಲದರ ನಡುವೆ ಕೋಚ್​ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹ ಕೇಳಿ ಬರುತ್ತಿದೆ.