ತಾರಾ ನೋರಿಸ್​ ಏಜೆನ್ಸಿ
ಕ್ರೀಡೆ

WPL: ತಾರಾ ನೋರಿಸ್​ ಮುಂಬೈ ಇಂಡಿಯನ್ಸ್​ಗೆ ವರ್ಗಾವಣೆ

28 ವರ್ಷದ ನೋರಿಸ್​ ಕಳೆದ ಆವೃತ್ತಿಗೆ ಮುನ್ನ 10 ಲಕ್ಷ ರೂ.ಗೆ ಯುಪಿ ತಂಡ ಸೇರಿದ್ದರು. ಇದೀಗ ಅದೇ ಮೊತ್ತಕ್ಕೆ ಅವರು ಮುಂಬೈ ತಂಡಕ್ಕೆ ವರ್ಗಾವಣೆಯಾಗಿದ್ದಾರೆ.

ನವದೆಹಲಿ: ಅಮೆರಿಕದ ಎಡಗೈ ವೇಗಿ ತಾರಾ ನೋರಿಸ್​ ಮುಂಬರುವ ವುಮೆನ್ಸ್​ ಪ್ರೀಮಿಯರ್​ ಲೀಗ್​ಗೆ (ಡಬ್ಲ್ಯುಪಿಎಲ್​) ಯುಪಿ ವಾರಿಯರ್ಸ್​ ತಂಡದಿಂದ ಮುಂಬೈ ಇಂಡಿಯನ್ಸ್​ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. 28 ವರ್ಷದ ನೋರಿಸ್​ ಕಳೆದ ಆವೃತ್ತಿಗೆ ಮುನ್ನ 10 ಲಕ್ಷ ರೂ.ಗೆ ಯುಪಿ ತಂಡ ಸೇರಿದ್ದರು. ಇದೀಗ ಅದೇ ಮೊತ್ತಕ್ಕೆ ಅವರು ಮುಂಬೈ ತಂಡಕ್ಕೆ ವರ್ಗಾವಣೆಯಾಗಿದ್ದಾರೆ.

ನೋರಿಸ್​ ಡಬ್ಲ್ಯುಪಿಎಲ್​ನಲ್ಲಿ ಆಡಿದ ಅಸೋಸಿಯೇಟ್​ ದೇಶದ ಮೊದಲ ಆಟಗಾರ್ತಿ ಎನಿಸಿದ್ದಾರೆ. ಮೊದಲ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಿದ್ದ ಅವರು, ಟೂರ್ನಿಯ ಇತಿಹಾಸದಲ್ಲಿ 5 ವಿಕೆಟ್​ ಗೊಂಚಲು ಪಡೆದ ಮೊದಲ ಬೌಲರ್​ ಎನಿಸಿದ್ದರು. 2021ರಲ್ಲಿ ಅಮೆರಿಕ ಪರ ಪದಾರ್ಪಣೆ ಮಾಡಿದ್ದ ಅವರು 5 ಏಕದಿನ ಮತ್ತು 17 ಟಿ20 ಪಂದ್ಯ ಆಡಿದ್ದಾರೆ.

ಡಬ್ಲ್ಯುಪಿಎಲ್​ 5ನೇ ಆವೃತ್ತಿ 2027ರ ಜನವರಿ 14ರಿಂದ ೆಬ್ರವರಿ 7ರವರೆಗೆ ನಡೆಯಲಿದೆ. ಅದಕ್ಕೆ ಮುನ್ನ ಅಕ್ಟೋಬರ್​ 28ಕ್ಕೆ ಕೊಚ್ಚಿಯಲ್ಲಿ ಆಟಗಾರ್ತಿಯರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.