Chris Woakes: ಇಂಗ್ಲೆಂಡ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 15 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
36 ವರ್ಷದ ಕ್ರಿಸ್ ಸೋಮವಾರ(ಸೆ.29) ಈ ನಿರ್ಧಾರವನ್ನು ದೃಢಪಡಿಸಿದ್ದಾರೆ. ಅಲ್ಲದೆ, ಆರ್‌ಸಿಬಿ ಕೂಡ ಅಧಿಕೃತ ಟಿಪ್ಪಣಿಯನ್ನು ಪ್ರಕಟಿಸಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಭುಜದ ಮೂಳೆ ಗಾಯದ ಕಾರಣ ಅವರು ಪಂದ್ಯದಿಂದ ನಿರ್ಗಮಿಸಿದರು. ಅಲ್ಲಿಂದ ಗಾಯದ ಕಾರಣದಿಂದ ಯಾವುದೇ ಪಂದ್ಯ ಆಡಿಲ್ಲ.
62 ಟೆಸ್ಟ್‌ಗಳು ಆಡಿರುವ ಕ್ರಿಸ್ 192 ವಿಕೆಟ್‌ಗಳು ಪಡೆದಿದ್ದಾರೆ. ಒಂದು ಶತಕದೊಂದಿಗೆ 2,034 ರನ್‌ಗಳು ಬಾರಿಸಿದ್ದಾರೆ. ಇನ್ನು ಏಕದಿನ ವೃತ್ತಿಜೀವನದಲ್ಲಿ 122 ಪಂದ್ಯಗಳನ್ನು ಆಡಿದ್ದಾರೆ, 173 ವಿಕೆಟ್‌ಗಳನ್ನು ಪಡೆದಿರುವ ಅವರು ಮತ್ತು 33 ಟಿ20ಗಳಲ್ಲಿ 31 ವಿಕೆಟ್‌ಗಳನ್ನು ಹೊಂದಿದ್ದಾರೆ.(ಏಜೆನ್ಸೀಸ್)