ಎಟಿಪಿ ಫೈನಲ್ಸ್​ ಪ್ರಶಸ್ತಿಯೊಂದಿಗೆ ಅಲ್ಕರಾಜ್​ ಏಜೆನ್ಸಿ
ಕ್ರೀಡೆ

ಎಟಿಪಿ ಫೈನಲ್ಸ್​ ಗೆದ್ದು ಇತಿಹಾಸ ಬರೆದ ಕಾರ್ಲೋಸ್​ ಅಲ್ಕರಾಜ್​

ಅಲ್ಕರಾಜ್​ ಕೆರಿಯರ್​ ಗ್ರಾಂಡ್​ ಸ್ಲಾಂನೊಂದಿಗೆ ಎಟಿಪಿ ಫೈನಲ್ಸ್​ನಲ್ಲೂ ಪ್ರಶಸ್ತಿ ಗೆದ್ದ ವಿಶ್ವದ 4ನೇ ಆಟಗಾರ ಎನಿಸಿದರು.

ಟುರಿನ್​ (ಇಟಲಿ): ಸ್ಪೇನ್​ ಯುವತಾರೆ ಕಾಲೋರ್ಸ್​ ಅಲ್ಕರಾಜ್​ ವರ್ಷಾಂತ್ಯದ ಪ್ರತಿಷ್ಠಿತ ಎಟಿಪಿ ಫೈನಲ್ಸ್​ ಪುರುಷರ ಟೆನಿಸ್​ ಟೂರ್ನಿಯ ಸಿಂಗಲ್ಸ್​ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ಬರೆದಿದ್ದಾರೆ. 7 ಗ್ರಾಂಡ್​ ಸ್ಲಾಂ ಪ್ರಶಸ್ತಿಗಳ ಒಡೆಯ ಅಲ್ಕರಾಜ್​ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್​ ಜ್ವೆರೆವ್​ ವಿರುದ್ಧ 6-2, 7-6 ನೇರಸೆಟ್​ಗಳಿಂದ ಗೆಲುವು ದಾಖಲಿಸಿದರು.

ಈ ಮೂಲಕ ಅವರು ಕೆರಿಯರ್​ ಗ್ರಾಂಡ್​ ಸ್ಲಾಂನೊಂದಿಗೆ ಎಟಿಪಿ ಫೈನಲ್ಸ್​ನಲ್ಲೂ ಪ್ರಶಸ್ತಿ ಗೆದ್ದ ವಿಶ್ವದ 4ನೇ ಆಟಗಾರ ಎನಿಸಿದರು. ಆಂಡ್ರೆ ಅಗಸಿ, ರೋಜರ್​ ಫೆಡರರ್​ ಮತ್ತು ನೊವಾಕ್​ ಜೋಕೊವಿಕ್​ ಹಿಂದಿನ ಸಾಧಕರು.

23 ವರ್ಷದ ಅಲ್ಕರಾಜ್​ ಈ ಸಾಧನೆ ಮಾಡಿದ ಅತಿ ಕಿರಿಯರೆನಿಸಿದರು. ಹಾಲಿ ವರ್ಷ 2 ಗ್ರಾಂಡ್​ ಸ್ಲಾಂ (ಫ್ರೆಂಚ್​, ಯುಎಸ್​ ಓಪನ್​) ಗೆದ್ದಿರುವ 29 ವರ್ಷದ ಜ್ವೆರೆವ್​ ಈ ಸೋಲಿನ ನಡುವೆಯೂ ವರ್ಷಾಂತ್ಯಕ್ಕೆ ವಿಶ್ವ ನಂ. 1 ಪಟ್ಟ ಕಾಯ್ದುಕೊಂಡಿದ್ದಾರೆ.