ಕ್ರೀಡೆ

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನವೇ ಭಾರತ ತಂಡಕ್ಕೆ ಶುಭ ಸುದ್ದಿ! | IND vs ENG Test

IND vs ENG Test: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಇದೇ ಜೂನ್ 20ರಿಂದ ಆರಂಭವಾಗಲಿದೆ. ಸರಣಿಗೆ ಇನ್ನೂ ನಾಲ್ಕು ದಿನಗಳು ಬಾಕಿ ಇರುವಂತೆಯೇ ತಂಡಕ್ಕೆ ಶುಭ ಸುದ್ದಿ ಕೇಳಿಬಂದಿದೆ.

ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ತಾಯಿ ಹೃದಯಾಘಾತದಿಂದ ಆಸ್ಪತ್ರೆ ಸೇರಿದರು ಎಂಬ ಕಾರಣಕ್ಕೆ ಇಂಗ್ಲೆಂಡ್​ನಿಂದ ದಿಢೀರ್​ ಹೊರಟ ಟೀಮ್ ಇಂಡಿಯಾ ಹೆಡ್​ ಕೋಚ್ ಗೌತಮ್ ಗಂಭೀರ್​, ಮಂಗಳವಾರ (ಜೂ.17) ಭಾರತ ತಂಡವನ್ನು ಸೇರಲಿದ್ದಾರೆ ಎಂದು ಕ್ರಿಕೆಟ್​ ಮೂಲಗಳು ತಿಳಿಸಿವೆ.

ತಮ್ಮ ತಾಯಿಗೆ ಹೃದಯಾಘಾತವಾಯಿತು ಎಂಬ ಸುದ್ದಿ ತಿಳಿದೊಡನೆ ಜೂನ್ 11ರಂದು ತವರಿಗೆ ವಾಪಾಸ್ ಆಗಿದ್ದ ಗಂಭೀರ್​, ತಾಯಿಯ ಆರೋಗ್ಯ ಕೊಂಚ ಚೇತರಿಸಿಕೊಂಡಿದ್ದನ್ನು ಖಚಿತಪಡಿಸಿಕೊಂಡ ಬಳಿಕವೇ ಲಂಡನ್‌ಗೆ ಮರಳಲು ಸಿದ್ಧವಾಗಿದ್ದಾರೆ ಎಂದು ವರದಿಗಳು ಹೇಳಿವೆ. ಇಂದು (ಜೂನ್ 16) ಸಂಜೆ ದೆಹಲಿಯಲ್ಲಿ ವಿಮಾನ ಹತ್ತಿರುವ ಗಂಭೀರ್​, ಮಂಗಳವಾರ (ಜೂನ್ 17) ತಂಡವನ್ನು ಸೇರಲಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಶುಭಮನ್ ಗಿಲ್​ ಪಡೆ

ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಪ್ರರಾಜ್ ಠಾಕೂರ್ ಯಾದವ್, ಆಕಾಶ್ ದೀಪ್, ಅರ್ಷದೀಪ್ ಸಿಂಗ್,(ಏಜೆನ್ಸೀಸ್).