ರಾಜ್ಕೋಟ್: ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರೈಸಿರುವ ಆರ್. ಅಶ್ವಿನ್, ಭಾರತ ಪರ ಸರ್ವಾಧಿಕ 619 ವಿಕೆಟ್ ಕಬಳಿಸಿರುವ ಅನಿಲ್ ಕುಂಬ್ಳೆ ಅವರ ದಾಖಲೆ ಮುರಿಯುವುದು ಮುಂದಿನ ಗುರಿ ಎಂದು ಹೇಳಿದ್ದಾರೆ.
"ನನಗಿನ್ನೂ 120 ವಿಕೆಟ್ಗಳು ಬೇಕಾಗಿವೆ. ನನಗೀಗ 37 ವರ್ಷ. ಮುಂದೆ ಏನಾಗಬಹುದು ಎಂಬುದು ಗೊತ್ತಿಲ್ಲ. ಆದರೆ ನನ್ನ ಪ್ರಯತ್ನವಂತೂ ಇರುತ್ತದೆ' ಎಂದು ಅಶ್ವಿನ್ ಹೇಳಿದ್ದಾರೆ.
"ನಾನು ಬ್ಯಾಟ್ಸ್ಮನ್ ಆಗಬೇಕೆಂದಿದ್ದೆ. ನಾನು ಸ್ಪಿನ್ನರ್ ಆಗಿದ್ದು ಆಕಸ್ಮಿಕ. ಜೀವನ ನನಗೊಂದು ಅವಕಾಶ ಕಲ್ಪಿಸಿದೆ. ನಾನು ಸಿಎಸ್ಕೆ ತಂಡ ಸೇರಿದಾಗ ಮುರಳೀಧರನ್ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಲು ಸಿದ್ಧರಿರಲಿಲ್ಲ. ಆಗ ನನಗೆ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವ ಅವಕಾಶ ಒಲಿಯಿತು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ನನ್ನ ವೃತ್ತೀಜಿವನದ ಆರಂಭ ಸಾಧಾರಣವಾಗಿದ್ದರೂ, ಐಪಿಎಲ್ನಿಂದಾಗಿ ಎಲ್ಲರ ಗಮನಸೆಳೆಯುವಂತಾಯಿತು. ಅದರಿಂದ ಟೆಸ್ಟ್ ಪದಾರ್ಪಣೆಯ ಅವಕಾಶವೂ ಲಭಿಸಿತು. ನಾನು ಟೆಸ್ಟ್ ಬೌಲರ್ ಆಗುವ ಬಗ್ಗೆ ಜನರು ಅನುಮಾನಪಟ್ಟಿದ್ದರು. 13 ವರ್ಷಗಳ ಬಳಿಕ ಈಗ ನನ್ನ ಸಾಧನೆಯೇನೂ ಕೆಟ್ಟದಾಗಿಲ್ಲ' ಎಂದು ಅಶ್ವಿನ್ 500 ವಿಕೆಟ್ಗಳ ಹಾದಿಯನ್ನು ಮೆಲುಕುಹಾಕಿದರು.