ಕ್ರೀಡೆ

ತಂದೆ-ತಾಯಿ-ತಂಗಿ ಬಳಿಕ ಈಗ ದೀಪಿಕಾ ಪಡುಕೋಣೆಗೂ ಕೋವಿಡ್ ಸೋಂಕು

ಬೆಂಗಳೂರು: ಬಾಲಿವುಡ್ ಬೆಡಗಿ, ನಟಿ ದೀಪಿಕಾ ಪಡುಕೋಣೆ ಅವರ ತಂದೆ-ತಾಯಿ-ತಂಗಿಯ ಬಳಿಕ ಇದೀಗ ಅವರಿಗೂ ಕರೊನಾ ಸೋಂಕು ತಗುಲಿದೆ. ದೀಪಿಕಾ ಪಡುಕೋಣೆಗೆ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಕೋವಿಡ್-19 ಪಾಸಿಟಿವ್ ಆಗಿರುವ ದೀಪಿಕಾ ಇದೀಗ ಬೆಂಗಳೂರಿನ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜ್ಜಲಾ, ತಂಗಿ ಅನಿಷಾ ಕೆಲವು ದಿನಗಳ ಹಿಂದೆ ಕರೊನಾ ಪರೀಕ್ಷೆಗೆ ಒಳಗಾಗಿದ್ದು, ಅವರಲ್ಲಿ ಕೋವಿಡ್ ಸೋಂಕಿರುವುದು ಈಗಾಗಲೇ ದೃಢಪಟ್ಟಿತ್ತು. ಇದೀಗ ದೀಪಿಕಾ ಕೂಡ ಸೋಂಕಿಗೆ ಒಳಗಾಗಿರುವುದರಿಂದ ಬಹುತೇಕ ಕುಟುಂಬವೇ ಸೋಂಕಿಗೆ ಒಳಗಾದಂತಾಗಿದೆ.

ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಅವರಿಗೆ ಜ್ವರ ಕಡಿಮೆ ಆಗದ್ದರಿಂದ ಹಾಗೂ ವಯಸ್ಸಿನ ಕಾರಣಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದ್ದು, ಇನ್ನು 2-3 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ಉಳಿದಂತೆ ದೀಪಿಕಾ, ಉಜ್ಜಲಾ, ಅನಿಷಾ ಮನೆಯಲ್ಲೇ ಕ್ವಾರಂಟೈನ್​ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.